ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ : ಗೋ. ಮಧುಸೂದನ್ ಗಡಿಪಾರಿಗೆ ಆಗ್ರಹ ..

ನಂಜನಗೂಡು : ಅಂಬೇಡ್ಕರ್ ಬರೆದಿರುವ ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ವಿಧಾನಪರಿಷತ್ ಸದಸ್ಯ ಗೋ ಮಧುಸೂದನ್ ಜಿಲ್ಲಾ ಆಡಳಿತ ಗಡಿಪಾರುವ ಮಾಡಬೇಕು ಎಂದು ಆಗ್ರಹಿಸಿ ದಸಂಸ ಸಂಘಟಕರ ವತಿಯಿಂದ  ಪ್ರತಿಭಟನೆ ನಡೆಸಲಾಯಿತು.

demonstration or festival? hands in the air

ನಂಜನಗೂಡಿನ ತಹಶೀಲ್ದಾರ್ ಕಚೇರಿಯ ಮುಂಭಾಗ ಜಮಾಯಿಸಿದ ದಸಂಸ ಸಂಘಟಕರು ಹಲವು ಬೇಡಿಕೆ ಇಟ್ಟುಕೊಂಡು ಧರಣಿ ನಡೆಸಿದರು. ನಂಜನಗೂಡು ತಾಲ್ಲೂಕಿನಲ್ಲಿ ಜೀತ ಪದ್ಧತಿಯಿಂದ ನಿಯುಕ್ತಿಗೊಂಡಿರುವ ರೈತರಿಗೆ ತಕ್ಷಣ ಜಿಲ್ಲಾಡಳಿತ ಪರಿಹಾರ ಒದಗಿಸಿಕೊಡಬೇಕು. ಬಗರ್ ಹುಕುಂ ರೈತರಿಗೆ ರಾಜ್ಯ ಸರ್ಕಾರ ತಕ್ಷಣ ಸಾಗುವಳಿ ಮಂಜೂರು ಮಾಡಬೇಕು.

ಜತೆಗೆ ದಲಿತರ ಮೇಲೆ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆ ಹಿಡಿಯಲು ಪೊಲೀಸರು ವಿಫಲರಾಗಿದ್ದಾರೆ. ಇನ್ನೂ ಅನೇಕ ಬೇಡಿಕೆಗಳನ್ನು ಇಟ್ಟುಕೊಂಡು ತಾಲ್ಲೂಕು ದಸಂಸ ಸಂಘಟಕರು ಪ್ರತಿಭಟನೆ ನಡೆಸಿದರು. ಸಂಚಾಲಕರಾದ ಕಾರ್ಯ ಬಸವಣ್ಣ ದೇವರಸನಹಳ್ಳಿ ಬಸವರಾಜು ಕೂಡಲೇ ಕುಮಾರ್ ಬಿಳಿಗೆರೆ ಸೋಮಣ್ಣ ಸಿದ್ದರಾಜು ಮಹದೇವ ಕತ್ವಾಡಿಪುರ ಗ್ರಾಮದ ಪುಟ್ಟಸ್ವಾಮಿ ಇನ್ನೂ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು .

Leave a Reply

Your email address will not be published.