ತಾಯಿಯ ಕಣ್ಣೀರು ನೋಡಿದ LeT ಭಯೋತ್ಪಾದಕ ಮಾಡಿದ್ದೇನು..?

ಶ್ರೀನಗರ : ಲಷ್ಕರೆ ತೊಯ್ಬಾ ಸಂಘಟನೆಗೆ ಸೇರ್ಪಡೆಯಾಗಿದ್ದ ಕಾಶ್ಮೀರಿ ಫುಟ್ಬಾಲ್ ಆಟಗಾರ ಮಜೀದ್ ಇರ್ಶಾದ್ ಖಾನ್ ಕೊನೆಗೂ ಶರಣಾಗಿದ್ದಾನೆ. ತಾಯಿಯ ಕಣ್ಣೀರಿಗೆ ಸೋತ ಈತ ಭದ್ರತಾ ಪಡೆಯ ಮುಂದೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾನೆ.

ಮಜೀದ್ ಸ್ನೇಹಿತ ಯವಾರ್ ನಿಸ್ಸರ್ ಶೆರ್ಗುರ್ಜಿ ಅಂತ್ಯಕ್ರಿಯೆಯ ಬಳಿಕ ಈತ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದ ಎನ್ನಲಾಗಿದೆ. ಜೊತೆಗೆ ತಾನು ಎಲ್ಇಟಿ ಉಗ್ರ ಸಂಘಟನೆ ಸೇರುತ್ತಿರುವುದರ ಕುರಿತು ಅಕ್ಟೋಬರ್ 29 ರಂದು ಫೇಸ್ಬುಕ್ ಮೂಲಕ ಸೂಚನೆ ನೀಡಿದ್ದ.

ಇದಾದ ಬಳಿಕ ಆತ ನಾಪತ್ತೆಯಾಗಿದ್ದು, ತಾಯಿ ಮಗನನ್ನು ಹುಡುಕುವ ಸಲುವಾಗಿ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದರು. ಬಳಿಕ ತನ್ನ ಮಗ ಉಗ್ರ ಸಂಘಟನೆಗೆ ಸೇರಿದ್ದಾನೆ ಎಂದು ತಿಳಿದು ಕಣ್ಣೀರು ಹಾಕಿದ್ದರು. ಈ ವಿಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಈ ವಿಡಿಯೊ ನೋಡಿದ ಮಜೀದ್ ತಾಯಿಯ ಕಣ್ಣೀರು ನೋಡಲಾಗದೆ ಉಗ್ರ ಸಂಘಟನೆ ಬಿಟ್ಟು ಶರಣಾಗಿದ್ದಾನೆ.

ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡಿದ್ದು, ಆತ ಮರಳಿ ಬರಲು ಬೇಕಾಗುವ ಎಲ್ಲಾ ಸಹಾಯವನ್ನು ಮಾಡಲು ನಾವು ಸಿದ್ದವಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com