ಚಿತ್ರದುರ್ಗ : ಚಿತ್ರಾನ್ನ, ಮಂಡಕ್ಕಿ ಸೇವಿಸಿ ಮಕ್ಕಳ ಸಾವು !

ಚಿತ್ರದುರ್ಗ : ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವಿಗೀಡಾದ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಪಾತಪ್ಪನಗುಡಿ ಗ್ರಾಮದಲ್ಲಿ ನಡೆದಿದೆ.


ಮೃತ ಮಕ್ಕಳನ್ನು ವರ್ಷಿಣಿ (3), ಜಗದೀಶ್ (6) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಮನೆಯಲ್ಲಿ ಮಂಡಕ್ಕಿ ಹಾಗೂ ಚಿತ್ರಾನ್ನ ತಿಂದು ಮಲಗಿದ್ದರು. ಆದರೆ ತಡರಾತ್ರಿ ಇದ್ದಕ್ಕಿದ್ದಂತೆ ಹೊಟ್ಟೆನೋವು ಎಂದು ಒದ್ದಾಡತೊಡಗಿದ್ದು, ಬಳಿಕ ವಾಂತಿ- ಭೇದಿಯಾಗಿತ್ತು. ಬಳಿಕ ಪೋಷಕರು ಇಬ್ಬರು ಮಕ್ಕಳಿಗೆ ಮಾತ್ರೆ ಕೊಟ್ಟು ಮಲಗಿಸಿದ್ದರು.
ಬೆಳಗಾಗುತ್ತಿದ್ದಂತೆ ಮಕ್ಕಳನ್ನು ಚಳ್ಳಕೆರೆ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಇಬ್ಬರು ಮಕ್ಕಳೂ ಸಾವಿಗೀಡಾಗಿದ್ದಾರೆ. ಪೋಷಕರು ಸಹ ಅದೇ ಆಹಾರ ಸೇವಿಸಿರುವ ಹಿನ್ನೆಲೆಯಲ್ಲಿ ಅವರ ತಪಾಸಣೆ ನಡೆಸಲಾಗಿದೆ. ಆಹಾರದಲ್ಲಿ ಹಲ್ಲಿ ಬಿದ್ದಿರುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published.

Social Media Auto Publish Powered By : XYZScripts.com