ವಧುವನ್ನು ಕರೆದೊಯ್ಯಲು ಹೆಲಿಕಾಪ್ಟರ್‌ ಏರಿ ಬಂದ ಮಧುಮಗ

ಲಖನೌ : ಉತ್ತರ ಪ್ರದೇಶದಲ್ಲಿ ಮದುಮಗನೊಬ್ಬ ತನ್ನ ಮದುವೆ ವಿಭಿನ್ನವಾಗಿರಬೇಕು, ಸದಾ ಕಾಲ ನೆನಪಿನಲ್ಲುಳಿಯಬೇಕು ಎಂಬ ಕಾರಣದಿಂದ ಹೆಲಿಕಾಪ್ಟರ್‌ ಏರಿ ಮದುವೆ ಮಂಟಪಕ್ಕೆ ಬಂದು ಅದೇ ಹೆಲಿಕಾಪ್ಟರ್‌ನಲ್ಲಿ ವಧುವನ್ನು ಕರೆದೊಯ್ದಿದ್ದಾನೆ.

ಹೆಲಿಕಾಪ್ಟರ್‌ನಲ್ಲಿ ಬಂದ ಶಾರುಖ್‌ ಖಾನ್‌ ಎಂಬಾತ ಉತ್ತರ ಪ್ರದೇಶದ ಹಾಪುರ ಎಂಬಲ್ಲಿ ವಿಭಿನ್ನವಾಗಿ ಮದುವೆಯಾಗಿದ್ದಾನೆ. ತನ್ನ ಮದುವೆ ಎಲ್ಲರಿಗಿಂತ ವಿಭಿನ್ನವಾಗಿರಬೇಕು ಹಾಗೂ ಸದಾ ನೆನಪಿನಲ್ಲುಳಿಯಬೇಕು ಎಂಬುದು ಶಾರುಖ್ ಕನಸಂತೆ. ಅದಕ್ಕಾಗಿ ಆತ ಈ ರೀತಿ ಮಾಡಿದ್ದಾನೆ. ಇದೇ ವೇಳೆ ವಧು ತಾಂಜಿಮ್‌ ಸಹ ಹೇಳಿಕೆ ನೀಡಿದ್ದು, ಪ್ರತೀ ಹೆಣ್ಣೂ ತನ್ನನ್ನು ಮದುವೆಯಾಗುವ ರಾಜಕುಮಾರನ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾಳೆ. ರಾಜಕುಮಾರನ ಜೊತೆ ಆಕಾಶದಲ್ಲಿ ಹಾರಾಡಬೇಕೆಂಬ ಆಸೆಯೂ ಇರುತ್ತದೆ. ನನ್ನ ಕನಸು ಈಗ ಈಡೇರಿದೆ ಎಂದಿದ್ದಾರೆ.

ವಧುವನ್ನು ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯುತ್ತಿರುವುದನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಯಾವುದೇ ಅಪಾಯವಿಲ್ಲದೆ ಮದುವೆ ನಡೆಯಲು ಉತ್ತರ ಪ್ರದೇಶ ಸರ್ಕಾರ ಕ್ರಮ ಕೈಗೊಂಡಿದ್ದು, ಪೊಲೀಸರನ್ನು ನಿಯೋಜಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com