ಅಯೋಧ್ಯೆ ವಿವಾದದಲ್ಲಿ ತಲೆ ಹಾಕಲು ಆ ರವಿಶಂಕರ್ ಗುರೂಜಿ ಯಾರು…?

ಲಖನೌ : ಅಯೋಧ್ಯೆ ವಿಚಾರವಾಗಿ ಉತ್ತರ ಪ್ರದೇಶ ಸಿಎಂ ಯೋಗಿಗೆ ಸಾಥ್ ನೀಡಲು ಮುಂದಾಗಿರುವ ಆರ್ಟ್ ಆಫ್‌ ಲಿವಿಂಗ್‌ನ ಮುಖ್ಯಸ್ಥ ರವಿ ಶಂಕರ್‌ ಗುರೂಜಿ ವಿರುದ್ದ ಬಿಜೆಪಿಯ ಮಾಜಿ ಸಂಸದ ರಾಂ ವಿಲಾಸ್‌ ವೇದಾಂತಿ ಕಿಡಿ ಕಾರಿದ್ದಾರೆ. ವಿವಾದದ ಮಧ್ಯಸ್ಥಿಕೆ ವಹಿಸಲು ನೀವ್ಯಾರು ಎಂದು ಪ್ರಶ್ನಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ವಿಚಾರವಾಗಿ ಮಧ್ಯಸ್ಥಿಕೆ ವಹಿಸುವುದಾಗಿ ರವಿ ಶಂಕರ್‌ ಗುರೂಜಿ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಬಿಜೆಪಿ ಸಂಸದ ವೇದಾಂತಿ ರವಿ ಶಂಕರ್‌ ವಿರುದ್ದ ಗುಡುಗಿದ್ದು, ತಮ್ಮ ಅಪಾರ ಪ್ರಮಾಣದ ಆಸ್ತಿಯನ್ನು ಬಚ್ಚಿಟ್ಟುಕೊಳ್ಳಲು, ತನಿಖೆಯಿಂದ ಪಾರಾಗುವ ದೃಷ್ಠಿಯಿಂದ ಈ ವಿವಾದದಲ್ಲಿ ತಲೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರವಿ ಶಂಕರ್‌ ಸೌಜನ್ಯಕ್ಕಾಗಿ ನನ್ನನ್ನು ಭೇಟಿ ಮಾಡಲು ಬರುತ್ತಿದ್ದಾರೆ. ಅವರ ಒಪ್ಪಂದ ಏನಿದೆಯೋ ನನಗೆ ತಿಳಿದಿಲ್ಲ. ಏನೇ ಆದರೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡೇ ತೀರುತ್ತೇವೆ ಎಂದಿದ್ದಾರೆ.

 

Leave a Reply

Your email address will not be published.