ವಿಮೆಯ ಆಸೆಗಾಗಿ ತಮ್ಮನನ್ನೇ ಕೊಂದ ಅಣ್ಣನಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ : ವಿಮೆ ಹಣಕ್ಕಾಗಿ ವಿಕಲಚೇತನ ತಮ್ಮನನ್ನು ಕೊಲೆ ಮಾಡಿದ ಆರೋಪಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 25,೦೦೦ ರೂ ದಂಡ ವಿಧಿಸಿದೆ.
ಶಿಕಾರಿಪುರ ತಾಲ್ಲೂಕು ಅಮಟೆಕೊಪ್ಪ ಗ್ರಾಮದ ಕುಮಾರ್ (40) ಶಿಕ್ಷೆಗೊಳಗಾದವ. ಈತ 2015 ರ ಏಪ್ರಿಲ್‌ನಲ್ಲಿ ತನ್ನ ತಮ್ಮ ಉಮೇಶ್‌ನನ್ನು ವಿಮೆ ಪರಿಹಾರ ಮೊತ್ತದ ಆಸೆಗಾಗಿ ಕೊಲೆ ಮಾಡಿದ್ದ. ಆಕ್ಷಿಡೆಂಟ್ ಬೆನಿಫಿಟ್‌ನಲ್ಲಿ 45 ಲಕ್ಷ ರೂ.ಗಳ ವಿಮಾ ಮಾಡಿಸಿ ವರ್ಷದ ಒಳಗೆ ಸತ್ತರೆ 45 ಲಕ್ಷ ರೂ. ಬರುತ್ತದೆಂಬ ದುರಾಸೆಯಿಂದ ಕೊಲೆಗೈದಿದ್ದ.
ಆರೋಪಿಯು ತನ್ನ ತಮ್ಮನನ್ನು ಹುಲ್ಲು ಲೋಡ್‌ಗೆಂದು ಕ್ಯಾಂಟರ್‌ನಲ್ಲಿ ಕರೆದುಕೊಂಡು ಹೋಗಿದ್ದ. ಶೆಟ್ಟಿಹಳ್ಳಿ ಮತ್ತು ಕಣಿವೆ ಮನೆ ಮಧ್ಯೆ ಇರುವ ಬ್ರಿಡ್ಜ್ ಹತ್ತಿರ ಕೆಳಗೆ ಇಳಿಸಿ ವಾಹನದ ಲೈಟ್ ಸರಿಪಡಿಸುವಂತೆ ಹೇಳಿ ವಾಹನದ ಕೆಳಗಡೆ ಮಲಗಿಸಿ ಆತನ ಮೇಲೆ ವಾಹನ ಹತ್ತಿಸಲು ಪ್ರಯತ್ನಿಸಿದ್ದ. ಆತ ತಪ್ಪಿಸಿಕೊಂಡಾಗ ಕಬ್ಬಿಣದ ರಾಡ್‌ನಿಂದ ಹೊಡೆದು ಕೆಳಗುರುಳಿಸಿ ನಂತರ ತಲೆ ಮೇಲೆ ಕ್ಯಾಂಟರ್ ಹತ್ತಿಸಿ ಅಪಘಾತವಾಗಿದೆ ಎಂಬಂತೆ ಬಿಂಬಿಸಿ ಸಾಕ್ಷಾಧಾರ ನಾಶ ಮಾಡಿದ್ದ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಷಣೆ ಸಲ್ಲಿಸಿದ್ದರು. ಶಿಕಾರಿಪುರ ಗ್ರಾಮಾಂತರ ಸಬ್ ಇನ್ಸ್‌ಪೆಕ್ಟರ್ ಸಿ.ಎನ್ ಚಂದ್ರಶೇಖರ್‌ರವರು ಪ್ರಕರಣ ದಾಖಲಿಸಿಕೊಂಡು ದೂರುದಾರ ಅಣ್ಣನಾದ ಕುಮಾರನ ಮೇಲೆ ಸಂಶಯದಿಂದ ತನಿಖೆ ಕೈಗೊಂಡು ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಪ್ಪನವರು ತನಿಖಾಧಿಕಾರಿಯಾಗಿ ಅಣ್ಣನೇ ತಮ್ಮನನ್ನು ವಿಮಾ ಹಣಕ್ಕೆ ಕೊಲೆಗೈದಿರುವ ವಿಷಯ ಬಯಲಿಗೆ ಬಂದಿತ್ತು.
ಸರ್ಕಾರದ ಪರವಾಗಿ ಜೆ. ಶಾಂತರಾಜ್ ವಾದ ಮಂಡಿಸಿದ್ದು, ಇಂದು ಅಣ್ಣನಿಗೆ ಶಿಕ್ಷೆ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com