Bigg boss ನಡೆಯುತ್ತಿರುವ ಇನ್ನೋವೇಟಿವ್‌ ಫಿಲಂ ಸಿಟಿ ಮೇಲೆ ಐಟಿ ರೇಡ್‌ !

ರಾಮನಗರ : ಬಿಡದಿಯ ಸಮೀಪವಿರುವ ಇನ್ನೋವೇಟಿವ್ ಫಿಲಂ ಸಿಟಿ ಸೇರಿದಂತೆ ಹಲವೆಡೆ ಇದು ಆದಾಯ ತೆರಿಗೆ ಇಲಾಕೆ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ಐದಕ್ಕೂ ಹೆಚ್ಚು ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸುತ್ತಿದ್ದು, ಇನ್ನೋವೇಟಿವ್‌ ಫಿಲಂ ಸಿಟಿಯ ಸಿಇಒ ಉಪಾಸನಾ ಅವರ ವಿಚಾರಣೆ ನಡೆಸಲಾಗುತ್ತಿದೆ.

500 ಎಕರೆ ಪ್ರದೇಶದಲ್ಲಿ ಫಿಲಂ ಸಿಟಿಯನ್ನು ನಿರ್ಮಾಣ ಮಾಡಲಾಗಿದ್ದು, ಕನ್ನಡದ ಬಿಗ್‌ ಬಾಸ್‌ ಸಹ ಇದೇ ಇನ್ನೋವೇಟಿವ್‌ ಸಿಟಿಯಲ್ಲಿ ನಡೆಯುತ್ತಿದೆ.

ಇದಲ್ಲದೆ ದೇಶಾದ್ಯಂತ ವ್ಯವಹಾರ ಹೊಂದಿರುವ ಡಿಎನ್‌ಎ ಎಂಟರ್‌ಟೈನ್ಮೆಂಟ್‌ ನೆಟ್‌ವರ್ಕ್‌ ಪ್ರೈ.ಲಿ., ಇನ್ನೋವೇಟಿವ್‌ ಮಲ್ಟಿಫ್ಲೆಕ್ಸ್‌ ಮೇಲೂ ದಾಳಿ ನಡೆದಿದೆ. ಡಿಎನ್‌ಎ ನೆಟ್ವರ್ಕ್‌ ಸಂಸ್ಥೆ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ವೆಂಕಟವರ್ಧನ್ಗೆ ಸೇರಿದ್ದು, ದೇಶದ ಪ್ರತಿಷ್ಠಿತ ಈವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳಲ್ಲಿ ಒಂದಾಗಿದೆ. ಇತ್ತೀಚಿಗೆ ನಡೆದ ವಿಧಾನಸೌಧ ವಜ್ರ ಮಹೋತ್ಸವದ ಈವೆಂಟ್‌  ಮ್ಯಾನೇಜ್‌ಮೆಂಟನ್ನು ಈ ಸಂಸ್ಥೆಯೇ ನೋಡಿಕೊಂಡಿತ್ತು.

ಡಿಎನ್​ಎ ನೆಟ್​ವರ್ಕ್​ ಸಂಸ್ಥೆಯ ಮಾಲೀಕ ವೆಂಕಟವರ್ಧನ್​ ವಿರಾಟ್ ಕೊಹ್ಲಿ ಸೇರಿದಂತೆ ಹಲವರು ಗಣ್ಯರಿಗೆ ಆಪ್ತರಾಗಿದ್ದು, ಈ ಭಾರಿ ಖುದ್ದಾಗಿ ವಿರಾಟ್ ಕೊಹ್ಲಿ ಖುದ್ದಾಗಿ ಐಟಿಸಿ ಗಾರ್ಡೇನಿಯಾ ಬಿಟ್ಟಿ ರಿಟ್ಜ್​​ ಕಾರ್ಲಟನ್​​ ಹೊಟೇಲ್​​ನಲ್ಲಿ ತಂಗಿದ್ದರು. ಇನ್ನು ಸಚಿವ ಪ್ರಿಯಾಂಕ ಖರ್ಗೆಗೂ ಆಪ್ತರಾಗಿರುವ ವೆಂಕಟವರ್ಧನ್​ ಗೆ ಸಾಕಷ್ಟು ಸರ್ಕಾರಿ ಜಾಹೀರಾತು ನೀಡಲಾಗಿತ್ತು. ಐಪಿಎಲ್​ ವೇಳೆ ಡಿಎನ್​ಎ ಅಪಾರ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಡಿಎನ್​ಎ ಸೊಲ್ಯೂಶನ್​ಗೆ ಸೇರಿದ ಬೆಂಗಳೂರಿನ 6 ಕಡೆ ಮುಂಬೈ, ದೆಹಲಿಯಲ್ಲಿ ದಾಳಿ ನಡೆದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com