ರಸಗುಲ್ಲ ಆಯ್ತು.. ಈಗ ಮೈಸೂರು ಪಾಕ್ GI ಹಕ್ಕಿಗಾಗಿ ಕನ್ನಡಿಗ – ತಮಿಳಿಗರ ಸಮರ..!

ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ನಡುವೆ ಕಾವೇರಿ ವಿವಾದದ ಜೊತೆಗೆ ಇನ್ನೊಂದು ಸೇರಿಕೊಂಡಿದೆ. ತಮಿಳಿಗರು – ಕನ್ನಡಿಗರ ನಡುವೆ ಖ್ಯಾತ ಸಿಹಿ ತಿನಿಸು ಮೈಸೂರು ಪಾಕಿನ ಭೌಗೋಳಿಕ ಸೂಚ್ಯಂಕಕ್ಕಾಗಿ ಹೋರಾಟ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೈಸೂರ್ ಪಾಕ್ ಹಕ್ಕಿಗಾಗಿ ಕರ್ನಾಟಕದಿಂದ ಹೋರಾಟವಾಗಬೇಕೆಂಬ ಚರ್ಚೆ ಆರಂಭಗೊಂಡಿದೆ. ಮೈಸೂರ್ ಪಾಕ್ ಮದ್ರಾಸಿಗರ ಆವಿಷ್ಕಾರ ಎಂದು ತಮಿಳಿಗರು ಹೇಳುತ್ತಿದ್ದಾರೆ. ಆದರೆ ಮೈಸೂರ್ ಪಾಕ್ ಆವಿಷ್ಕಾರದ ಸಂಪೂರ್ಣ ಶ್ರೇಯಸ್ಸು ಮೈಸೂರಿಗೆ ಸಲ್ಲಬೇಕು ಅನ್ನೋದು ಕನ್ನಡಿಗರ ವಾದವಾಗಿದೆ.

ಮೈಸೂರ್ ಪಾಕ್‌ನ GI (geographical indication) ಮೈಸೂರಿಗೆ ಸೇರಿದ್ದು. ಈ ವಿಚಾರದಲ್ಲಿ ಯಾವುದೇ ಪ್ರಶ್ನೆ ಉದ್ಭವವಾಗುವಂತಿಲ್ಲ. ಮೈಸೂರ್ ಪಾಕ್ ವಿಚಾರವು ನ್ಯಾಯಲಯದ ಮೆಟ್ಟಿಲೇರುವ ಸಾಧ್ಯತೆಯಿದೆ. 74 ವರ್ಷಗಳ ಹಿಂದೆ ಆವಿಷ್ಕಾರಗೊಂಡಿರುವ ಮೈಸೂರ್ ಪಾಕ್ ಜಿಐಗಾಗಿ ಕರ್ನಾಟಕ-ತಮಿಳುನಾಡು ನಡುವೆ ಸಮರ ಏರ್ಪಟ್ಟಿದೆ.

ಅಂದು ಮದ್ರಾಸ್ ಸರ್ಕಾರವಿದ್ದ ಕಾರಣ ಮೈಸೂರ್ ಪಾಕ್ ತಯಾರಿಸಿದ ಹೆಮ್ಮೆ ತಮಿಳಿಗರು ನಮ್ಮದೆನ್ನುತ್ತಿದ್ದಾರೆ. ಆದರೆ ಮೈಸೂರ್ ಪಾಕ್ ಹುಟ್ಟಿದ್ದು ಮೈಸೂರು ಅರಮನೆಯಲ್ಲಿ ಅನ್ನೋದು ಕರ್ನಾಟಕ ವಾದವಾಗಿದೆ. ಪಶ್ಚಿಮಬಂಗಾಳದ ರಸಗುಲ್ಲ ರೀತಿಯಲ್ಲಿ ಮೈಸೂರ್ ಪಾಕ್‌ ಹಕ್ಕಿಗಾಗಿ ಎರಡೂ ರಾಜ್ಯಗಳ ನಡುವೆ ಸಮರ ಶುರುವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com