ಸಿನಿಮಾ ರಿಲೀಸ್ ಆದರೆ ದೀಪಿಕಾ ಮೂಗು ಕತ್ತರಿಸುತ್ತೇವೆಂದ ರಜಪೂತರು….!

ಮುಂಬೈ : ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಸಿನಿಮಾ ವಿಚಾರವಾಗಿ ರಜಪೂತರ ಪ್ರತಿಭಟನೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಚಿತ್ರ ಬಿಡುಗಡೆಗೆ ರಜಪೂತರು ಒಪ್ಪಿಗೆ ನೀಡದಿರುವುದು ಚಿತ್ರ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಿನಿಮಾ ಕುರಿತಂತೆ ರಜಪೂತ ಕರ್ಣಿ ಸೇನಾದ ಮುಖ್ಯಸ್ಥ ಮಹಿಪಾಲ್‌ ಸಿಂಗ್ ಮಕ್ರಾನಾ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೊದಲ್ಲಿ ರಜಪೂತರು ಮಹಿಳೆಯರ ಮೇಲೆ ಕೈ ಮಾಡುವುದಿಲ್ಲ. ಅಂತಹ ಅನಿವಾರ್ಯತೆ ಇದ್ದರೆ ಮಾತ್ರ ಕೈ ಮಾಡುತ್ತಾರೆ. ಲಕ್ಷ್ಣಣ ಶೂರ್ಪನಕಿಗೆ ಮಾಡಿದಂತೆ ದೀಪಿಕಾಗೂ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಿನಿಮಾದ ಚಿತ್ರೀಕರಣ ಮಾಡುವಾಗಲೇ ರಜಪೂತ ಕರ್ಣಿ ಸೇನಾ ವಿರೋಧ ವ್ಯಕ್ಪಡಿಸಿತ್ತು. ಅಲ್ಲದೆ ಡಿಸೆಂಬರ್‌ 1ರಂದು ಪದ್ಮಾವತಿ ಸಿನಿಮಾ ರಿಲೀಸ್ ಆಗುತ್ತಿದ್ದು, ಅಂದು ಭಾರತ್‌ ಬಂದ್‌ಗೆ ಕರೆ ನೀಡಲಾಗಿದೆ.

ಈ ಬಂದ್‌ನಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಲಿದ್ದೇವೆ.  ನಮ್ಮ ಪೂರ್ವಜರು ರಕ್ತದಲ್ಲಿ ಇತಿಹಾಸ ಬರೆದಿದ್ದಾರೆ. ಅದಕ್ಕೆ ಮಸಿ ಬಳಿಯಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com