1 ಲೀಟರ್‌ ಮೂತ್ರಕ್ಕೆ 1 ರೂ : ಕೇಂದ್ರ ಸರ್ಕಾರದಿಂದ ದೇಶದ ಜನರಿಗೆ “ಮೂತ್ರ ಭಾಗ್ಯ”!!

ದೆಹಲಿ : ಕೇಂದ್ರ ಸರ್ಕಾರ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಯೂರಿಯಾ ಉತ್ಪಾದಿಸಲು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಪ್ರತಿಯೊಂದು ತಾಲ್ಲೂಕು ಕೇಂದ್ರದಲ್ಲೂ ಮೂತ್ರ ಬ್ಯಾಂಕ್‌ ಸ್ಥಾಪಿಸಲು ಮುಂದಾಗಿದ್ದಾರೆ. ಈ ಮೂಲಕ ಯೂರಿಯಾ ಆಮದು ಅವಲಂಬನೆ ಕಡಿಮೆ ಮಾಡುವ ಉದ್ದೇಶ ಹೊಂದಿದ್ದಾರೆ.

ಮನುಷ್ಯನ ಮೂತ್ರದಲ್ಲಿ ನೈಟ್ರೋಜನ್ ಪ್ರಮಾಣ ಸಾಕಷ್ಟಿದ್ದು, ಇದನ್ನು ವ್ಯರ್ಥ ಮಾಡುತ್ತಿದ್ದೇವೆ. ಕಸದಿಂದ ರಸ ತೆಗೆಯುವುದು ನನ್ನ ಪ್ಯಾಷನ್‌. ಇದನ್ನು ಪ್ರಯತ್ನಿಸುವುದರಲ್ಲಿ ಯಾವುದೇ ಹಾನಿಯಿಲ್ಲ. ಈಗಾಗಲೆ ಪಾಸ್ಪರಸ್‌ ಹಾಗೂ ಪೊಟ್ಯಾಷಿಯಂಗೆ ಬದಲಾಗಿ ಸಾವಯವ ಇದೆ. ಅದೇ ರೀತಿ ನೈಟ್ರೋಜನ್‌ನನ್ನು ಉತ್ಪಾದನೆ ಮಾಡುವ ಪ್ರಯತ್ನ ಮಾಡುವುದಾಗಿ ನಿತಿನ್ ಗಡ್ಕರಿ ಹೇಳಿದ್ದಾರೆ.

ಸದ್ಯ  ಈ ಯೋಜನೆ ಪ್ರಾಥಮಿಕ ಹಂತದಲ್ಲಿದ್ದು, ಇದನ್ನು ಜಾರಿಗೆ ತರಲು ಸ್ವೀಡನ್ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ.

ಈ ಯೋಜನೆಯನ್ನು ಮೊದಲು ಗ್ರಾಮೀಣ ಭಾಗದಲ್ಲಿ ಜಾರಿಗೊಳಿಸಲಾಗುವುದು. ಬಳಿಕ ನಗರ ಪ್ರದೇಶಕ್ಕೆ ವಿಸ್ತರಣೆ ಮಾಡಲಾಗುತ್ತದೆ. ಒಂದು ಬಾರಿಗೆ ಪ್ಲಾಸ್ಟಿಕ್‌ ಕ್ಯಾನ್‌ನಲ್ಲಿ 10 ಲೀ. ಮೂತ್ರ ತರಬೇಕು. ಅಲ್ಲದೆ ಸರ್ಕಾರದಿಂದಲೇ ಪ್ಲಾಸ್ಟಿಕ್‌ ಕ್ಯಾನ್‌ ನೀಡಲಾಗುತ್ತದೆ. ಬಳಿಕ ಅದನ್ನು ಶುದ್ದ ಮಾಡಿ ಗೊಬ್ಬರ ತಯಾರಿಸಲಾಗುತ್ತದೆ ಎಂದಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com