CRICKET : ಸುನಿಲ್ ಗವಾಸ್ಕರ್ ದಾಖಲೆ ಸರಿಗಟ್ಟಿದ ಕೆ.ಎಲ್ ರಾಹುಲ್..!?

ಗುರುವಾರ ಆರಂಭಗೊಂಡ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸಮನ್ ಕೆ.ಎಲ್ ರಾಹುಲ್ ಹೆಸರಿಗೆ ಬೇಡದ ದಾಖಲೆಯೊಂದು ಸೇರ್ಪಡೆಯಾಗಿದೆ. ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡು ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು. ಶಿಖರ್ ಧವನ್ ಅವರೊಂದಿಗೆ ಓಪನಿಂಗ್ ಬ್ಯಾಟ್ಸಮನ್ ಆಗಿ ಕಣಕ್ಕಿಳಿದ ರಾಹುಲ್ ಪಂದ್ಯದ ಮೊದಲ ಓವರಿನ ಮೊದಲ ಎಸೆತದಲ್ಲಿಯೇ ಔಟಾದರು. ಲಂಕಾ ಬೌಲರ್ ಸುರಂಗಾ ಲಕ್ಮಲ್ ಬೌಲಿಂಗ್ ನಲ್ಲಿ ಡಿಕ್ವೆಲಾಗೆ ಕ್ಯಾಚಿತ್ತ ರಾಹುಲ್, ಶೂನ್ಯಕ್ಕೆ ಔಟಾಗಿ ನಿರ್ಗಮಿಸಿದರು.

Image result for rahul golden duck test

ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಎಸೆತದಲ್ಲಿಯೇ ಔಟಾದ ಮೂರನೇ ಭಾರತೀಯ ಎನಿಸಿಕೊಂಡರು. ಈ ಮೊದಲು ಈಡನ್ ಮೈದಾನದಲ್ಲಿ ಸುನಿಲ್ ಗವಾಸ್ಕರ್, ಸುಧಿರ್ ನಾಯಕ್ ‘ ಗೋಲ್ಡನ್ ಡಕ್ ‘ ಔಟ್ ಆಗಿ ಹೊರನಡೆದಿದ್ದರು. (ಯಾವುದೇ ಕ್ರಮಾಂಕದಲ್ಲಿ ಆಡಿದರೂ, ಬ್ಯಾಟ್ಸಮನ್ ತಾನಾಡಿದ ಮೊದಲ ಎಸೆತದಲ್ಲಿಯೇ ಔಟಾದರೆ ಅದನ್ನು ‘ಗೋಲ್ಡನ್ ಡಕ್’ ಎಂದು ಪರಿಗಣಿಸಲಾಗುತ್ತದೆ)

ಇದುವರೆಗೆ ಭಾರತದ 6 ಬ್ಯಾಟ್ಸಮನ್ ಗಳು ಹೀಗೆ ಪಂದ್ಯದ ಮೊದಲ ಎಸೆತದಲ್ಲಿಯೇ ಔಟಾಗಿದ್ದಾರೆ. ಸುನಿಲ್ ಗವಾಸ್ಕರ್, ಸುಧಿರ್ ನಾಯಕ್, ಡಬ್ಲ್ಯೂವಿ ರಾಮನ್, ಶಿವ ಸುಂದರ್ ದಾಸ್, ವಾಸಿಮ್ ಜಾಫರ್ ಹಾಗೂ ಈಗ ಕೆಎಲ್ ರಾಹುಲ್, ಈ ಪಟ್ಟಿಗೆ 6 ನೆಯವರಾಗಿ ಸೇರ್ಪಡೆಗೊಂಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com