Badminton : ಚೈನಾ ಓಪನ್ ಕ್ವಾರ್ಟರ್ ಫೈನಲ್ ಗೆ ಸಿಂಧು : ಪ್ರಣಯ್, ಸೈನಾಗೆ ನಿರಾಸೆ

ವಿಶ್ವದ 2ನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಭಾರತದ ಪಿ.ವಿ ಸಿಂಧು ಚೈನಾ ಓಪನ್ ಸೂಪರ್ ಸಿರೀಸ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 22 ವರ್ಷದ ಸಿಂಧು, ಚೀನಾದ 17 ವರ್ಷದ ಹ್ಯಾನ್ ಯು ಅವರನ್ನು ಮಣಿಸಿದ್ದಾರೆ. 40 ನಿಮಿಷಗಳವರೆಗೆ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 15-21, 13-21 ಪಾಯಿಂಟ್ ಗಳಿಂದ ನೇರ ಗೇಮ್ ಗಳಲ್ಲಿ ಜಯ ಗಳಿಸಿದರು.  ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ಚೀನಾದ ಫ್ಯಾಂಗ್ಜೀ ಗಾವೋ ಅವರನ್ನು ಎದುರಿಸಲಿದ್ದಾರೆ.

ಆದರೆ ಭಾರತದ ಸೈನಾ ನೆಹ್ವಾಲ್ ಹಾಗೂ ಎಚ್ ಎಸ್ ಪ್ರಣಯ್ ನಿರಾಸೆ ಅನುಭವಿಸಿದರು. ಸೈನಾ ನೆಹ್ವಾಲ್ ಜಪಾನಿನ ಅಕಾನೆ ಯಾಮಾಗುಚಿ ಅವರ ಎದುರು 21-18, 21-11 ಪಾಯಿಂಟ್ ಗಳಿಂದ ನೇರ ಸೋಲು ಅನುಭವಿಸಿದರು. ಅಕಾನೆ ಯಾಮಾಗುಚಿ ವಿರುದ್ಧ ಎದುವರೆಗೆ ಆಡಿರುವ 5 ಮುಖಾಮುಖಿ ಪಂದ್ಯಗಳಲ್ಲಿ ಸೈನಾ 4 ಬಾರಿ ಸೋಲು ಕಂಡಿದ್ದು, 1 ರಲ್ಲಿ ಜಯಗಳಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಪ್ರಣಯ್ 21-19, 21-17 ಪಾಯಿಂಟ್ ಗಳಿಂದ ಹಾಂಕಾಂಗ್ ನ ಲೀ ಚೆಕ್ ಅವರ ವಿರುದ್ಧ ಪರಾಭವಗೊಂಡರು.

Leave a Reply

Your email address will not be published.

Social Media Auto Publish Powered By : XYZScripts.com