ಯುವಕರ ಪುಂಡಾಟಕ್ಕೆ ಹೊತ್ತಿ ಉರಿದ ಬೆಳಗಾವಿ ಮಾರ್ಕೆಟ್‌ : ಬೆಂಕಿಗಾಹುತಿಯಾದ ವಾಹನಗಳು

ಬೆಳಗಾವಿ : ಕ್ಷುಲ್ಲಕ ಕಾರಣಕ್ಕೆ ಬೆಳಗಾವಿಯಲ್ಲಿ ಬುಧವಾರ ರಾತ್ರಿ  ಎರಡು ಗುಂಪುಗಳ ಮಧ್ಯೆ ಗಲಭೆ ಉಂಟಾಗಿದ್ದು, ವಾಹನಗಳು ಬೆಂಕಿಗಾಹುತಿಯಾಗಿವೆ. ನಗರದ ಕಡಕಗಲ್ಲಿ, ಶಾಸ್ತ್ರಿ ಚೌಕ ಸುತ್ತಮುತ್ತ ಗಲಭೆ ನಡೆದಿದ್ದು, ಎಂರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ಹಾಗೂ ಬಾಟಲಿ ತೂರಾಟ ನಡೆಸಿದ್ದಾರೆ. ಅಲ್ಲದೆ ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಘಟನೆ ವೇಳೆ 4 ಬೈಕ್‌, 1 ಆಟೋ ಬೆಂಕಿಗಾಹುತಿಯಾಗಿದ್ದು, ಅನೇಕ ವಾಹನಗಳು ಜಖಂ ಆಗಿವೆ. ಗಲಭೆಯನ್ನು ನಿಯಂತ್ರಿಸಲು ಪೊಲೀಸ್ ಆಯುಕ್ತ ಕೃಷ್ಣ ಭಟ್‌ ಭೇಟಿ , ಡಿಸಿಪಿ ಅಮರನಾಥ್‌, ಎಸಿಪಿ ಶಂಕರ್‌ ಮಾರಿಹಾಳ ಸ್ಥಳಕ್ಕೆ ಆಗಮಿಸಿದ ವೇಳೆ ಅವರಿಗೂ ಕಲ್ಲೇಟು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಕೆಎಸ್‌ಆರ್‌ಪಿ ತುಕಡಿ ಹಾಗೂ ನಗರದ ವಿವಿಧ ಠಾಣೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಗಲಾಟೆ ನಡೆಸಿದ ವ್ಯಕ್ತಿಗಳ ವಿಡಿಯೊ ಪೊಲೀಸರು ಕೈ ಸೇರಿದ್ದು, ಈ ಸಂಬಂಧ ಮಾರ್ಕೆಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com