ಪಿಶಾಚಿ ಹೇಗಿರುತ್ತೆ ಗೊತ್ತಾ ಎಂದ ಸಿ.ಟಿ ರವಿಗೆ ರಾಯರೆಡ್ಡಿ ತೋರಿಸಿದ್ದು ಯಾರನ್ನ…?

ಬೆಳಗಾವಿ : ಬೆಳಗಾವಿಯ ಅಧಿವೇಶದಲ್ಲಿಂದು ಮೂಢ ನಂಬಿಕೆ ಮತ್ತು ಅಮಾನವೀಯ ಪದ್ದತಿಗಳ ನಿಯಂತ್ರಣ ಕಾಯ್ದೆ ಕುರಿತು ಚರ್ಚೆ ನಡೆದಿತ್ತು. ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಕಾಯ್ದೆಯನ್ನು ಮಂಡಿಸಿದರು. ಬಳಿಕ ಕಾಯ್ದೆ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಶಾಸಕ ಸಿ.ಟಿ ರವಿ, ಕಾಯ್ದೆಯಲ್ಲಿ ಪಿಶಾಚಿ ಬಿಡಿಸುತ್ತೇವೆ ಎಂದು ನಂಬಿಸುವುದು ಅಪರಾಧ ಎಂದಿದೆ. ಅಪರಾಧ ಎನ್ನಬೇಕಾದರೆ ಯಾರಾದರೂ ಪಿಶಾಚಿ ನೋಡಿರಬೇಕು. ಪಿಶಾಚಿ ಹೇಗಿರುತ್ತದೆ ಎಂದು ಪದೇ ಪದೇ ಪ್ರಶ್ನಿಸಿದರು.

ಪದೇ ಪದೇ ಪ್ರಶ್ನೆಯನ್ನು ಕೇಳಿದಾಗ ಕೆರಳಿದ  ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ನಿಮಗೆ ಪಿಶಾಚಿ ಹೆಂಗಿದೆ ಎನ್ನುವುದಕ್ಕೆ ಉತ್ತರ ಬೇಕು ತಾನೆ ? ಹಾಗಾದರೆ ನಿಮ್ಮ ಬಿಜೆಪಿಯ ಈಶ್ವರಪ್ಪನ ರೀತಿನೇ ಇರುತ್ತೆ. ಅವರನ್ನೇ ನೋಡಿ, ಪಿಶಾಚಿ ಹೇಗಿರುತ್ತದೆ ಎಂದು ಗೊತ್ತಾಗುತ್ತದೆ ಎಂದಿದ್ದಾರೆ.

One thought on “ಪಿಶಾಚಿ ಹೇಗಿರುತ್ತೆ ಗೊತ್ತಾ ಎಂದ ಸಿ.ಟಿ ರವಿಗೆ ರಾಯರೆಡ್ಡಿ ತೋರಿಸಿದ್ದು ಯಾರನ್ನ…?

 • November 17, 2017 at 11:07 AM
  Permalink

  With havin so much written content do you ever rrun into any problems of plagorism or copyright infringement?
  My site has a lot off exclusive content I’ve either created
  myself or outsourced but it appears a lot of it is popping it up all over the internet
  without my agreement. Do you know any methods to help reduce
  content from being stolen? I’d really appreciate it.

  Reply

Leave a Reply

Your email address will not be published.

Social Media Auto Publish Powered By : XYZScripts.com