ಬಳ್ಳಾರಿಗೆ ಬರಲು ಗಣಿ ಧಣಿ ರೆಡ್ಡಿಗೆ ಸುಪ್ರೀಂ ಅನುಮತಿ

ಬಳ್ಳಾರಿ : ಅಕ್ರಮ ಗಣಿಗಾರಿಕೆ ಅಪರಾಧದಡಿ ಸಿಬಿಐ ನಿಂದ ಬಂಧಿತರಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಗಣಿ ಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರಿಗೆ ಬಳ್ಳಾರಿಗೆ ಬರಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ಈ ಹಿಂದೆ ಸಾಕ್ಷಿ ನಾಶ ಅಥವಾ ಬೆದರಿಕೆ ಹಾಕಬಹುದು ಎಂಬ ಆರೋಪದ ಮೇಲೆ ಅವರನ್ನು ಬಳ್ಳಾರಿಗೆ ಬರದಂತೆ ಷರತ್ತು ವಿಧಿಸಿ ಸುಪ್ರೀಂಕೋರ್ಟ್‌ ಜಾಮೀನು ನೀಡಿತ್ತು.

ಇತ್ತೀಚೆಗಷ್ಟೇ ದಸರಾ ಹಬ್ಬದ ಸಂದರ್ಭದಲ್ಲಿ ರೆಡ್ಡಿ ಬಳ್ಳಾರಿಗೆ ಬಂದಿದ್ದರು. ಬಳಿಕ ನವೆಂಬರ್‌ 23ರಿಂದ 26ರವರೆಗೆ ಬಳ್ಳಾರಿಯಲ್ಲಿರಲು ಅನುಮತಿ ಪಡೆದಿದ್ದಾರೆ  ಎಂದು ತಿಳಿದುಬಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com