ಪ್ಲೇ ಸ್ಟೋರ್‌ನಿಂದ UC BROWSER ನ್ನು ತೆಗೆದು ಹಾಕಿದ GOOGLE : ಕಾರಣ ಕೇಳಿದ್ರೆ ಶಾಕ್ ಆಗೋದು ಖಂಡಿತ !

ದೆಹಲಿ : ಆ್ಯಂಡ್ರಾಯ್ಡ್‌ನ ಪ್ಲೇ ಸ್ಟೋರ್‌ನಲ್ಲಿ ಸುಮಾರು 500 ಮಿಲಿಯನ್‌ ಡೌನ್‌ಲೋಡ್‌ ಆಗಿದ್ದ ಯುಸಿ ಬ್ರೌಸರನ್ನು ತೆಗೆದುಹಾಕಲಾಗಿದೆ. ಆದರೆ ಈ ಬಗ್ಗೆ ಗೂಗಲ್‌ ಯಾವುದೇ ಮುನ್ಸೂಚನೆ ನೀಡಿಲ್ಲ. ಭದ್ರತೆಯ ಕಾರಣ ನೀಡಿ ಈ ಆ್ಯಪನ್ನು ತೆಗೆದು ಹಾಕಿದೆ.

ಯುಸಿ ಬ್ರೌಸರನ್ನು ಚೀನಾದ ಅಲಿಬಾಬಾ ಸಂಸ್ಥೆ ಹುಟ್ಟು ಹಾಕಿದ್ದು, ಈ ಯುಸಿ ಬ್ರೌಸರ್‌ ತನ್ನ ಬಳಕೆದಾರರ ಮಾಹಿತಿ ಮತ್ತು ಡಾಟಾಗಳನ್ನು ಚೀನಾದ ಸರ್ವರ್‌ಗಳಿಗೆ ಕಳುಹಿಸುತ್ತಿದೆಯಂತೆ. ಈ ಆಪಾದನೆ ಮೇರೆಗೆ ಗೂಗಲ್‌ ತನ್ನ ಬಳಕೆದಾರರ ಹಿತದೃಷ್ಠಿಯಿಂದ ಇದನ್ನು ತೆಗೆದು ಹಾಕಿದೆ.

ನೀವು ಪ್ಲೇ ಸ್ಟೋರ್‌ನಲ್ಲಿ ಯುಸಿ ಬ್ರೌಸರ್ ಎಂದು ಟೈಪ್ ಮಾಡಿ ಸರ್ಚ್‌ ಕೊಟ್ಟರೆ ನಿಮಗೆ ಯುಸಿ ಬ್ರೌಸರ್ ಮಿನಿ ಮಾತ್ರ ಕಂಡು ಬರುತ್ತದೆ. ಆದರೆ ಯುಸಿ ಬ್ರೌಸರ್ ಸಿಗುವುದಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com