See : ಶ್ರೀದೇವಿ ಪುತ್ರಿ ಜಾಹ್ನವಿ ಬಾಲಿವುಡ್ ಎಂಟ್ರಿ : ‘ ಧಡಕ್ ‘ ಚಿತ್ರದ First look ಬಿಡುಗಡೆ..!

ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ಹಾಗೂ ಬೋನಿ ಕಪೂರ್ ಮಗಳು ಜಾಹ್ನವಿ ಕಪೂರ್ ಅಭಿನಯಿಸಿರುವ ಮೊದಲ ಚಿತ್ರ ‘ ಧಡಕ್ ‘ ನ ಫರ್ಸ್ಟ್ ಲುಕ್ ಬುಧವಾರ ಬಿಡುಗಡೆಗೊಂಡಿದೆ.

Image result for jhanvi kapoor with sridevi

ಕರಣ್ ಜೋಹರ್, ತಮ್ಮ ಮಾಲೀಕತ್ವದ ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಶಾಂಕ್ ಖೇತಾನ್ ನಿರ್ದೇಶಿಸಿದ್ದಾರೆ. ಕರಣ್ ಜೋಹರ್ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಧಡಕ್ ಚಿತ್ರದ ‘ ಫರ್ಸ್ಟ್ ಲುಕ್ ‘ ಬಿಡುಗಡೆಗೊಳಿಸಿದ್ದಾರೆ.

ಶಾಹಿದ್ ಕಪೂರ್ ಸೋದರ ಇಶಾನ್ ಖಟ್ಟರ್ ಈ ಸಿನೆಮಾದ ಮೂಲಕ ಹಿಂದಿ ಚಿತ್ರರಂಗವನ್ನು ಪ್ರವೇಶಿಸಲಿದ್ದಾರೆ. ನಟ ರಾಜೇಶ್ ಖಟ್ಟರ್ ಹಾಗೂ ಕಥಕ್ ನೃತ್ಯಗಾತಿ ನೀಲಿಮಾ ಅಜೀಮ್ ಅವರ ಮಗ ಇಶಾನ್ ಧಡಕ್ ಮೂಲಕ ಬಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ. ‘ ಧಡಕ್ ‘ ಮರಾಠಿಯ ಸೂಪರ್ ಹಿಟ್ ಚಲನಚಿತ್ರ ‘ ಸೈರಾಟ್ ‘ ನ ಸೀಕ್ವೆಲ್ ಆಗಿದೆ. ಮುಂದಿನ ವರ್ಷ ಅಂದರೆ 2018 ರ ಜುಲೈತಿಂಗಳಲ್ಲಿ ‘ ಧಡಕ್ ‘ ಚಿತ್ರ ತೆರೆಕಾಣಲಿದೆ.

Leave a Reply

Your email address will not be published.

Social Media Auto Publish Powered By : XYZScripts.com