ಮಂತ್ರ ಮಾಂಗಲ್ಯಕ್ಕೆ ಮನಸೋತು ಮದುವೆ ಮಾಡಿಕೊಂಡ ಅಮೆರಿಕ ರಿಟರ್ನ್‌

ಮೈಸೂರು : ಮೈಸೂರಿನಲ್ಲಿ ಇಂದು ಅಪರೂಪದ ಮದುವೆಯೊಂದು ನಡೆದಿದೆ. ಅಮೆರಿಕದಿಂದ ಬಂದ ವರ ಮೈಸೂರಿಗೆ ಬಂದು ಮಂತ್ರ ಮಾಂಗಲ್ಯದ ಮೂಲಕ ವಿವಾಹವಾಗಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಮೈಸೂರು ಮೂಲದ ಪವನ್‌ ಕುಮಾರ್‌ ಮೈಸೂರಿನ ರಂಜಿತ ಎಂಬುವವರನ್ನು ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗಿದ್ದಾರೆ. ಅಮೆರಿಕದಲ್ಲಿ  ನೆಲೆಸಿರುವ ಪವನ್‌ ಸಮಾಜದ ಮೂಢನಂಬಿಕೆಗಳನ್ನು ವಿರೋಧಿಸುತ್ತಿದ್ದರು. ಆದ್ದರಿಂದ ಜಾತಕ, ಕಾಲ, ದಿನ ಯಾವುದನ್ನೂ ನೋಡದೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

33 ವರ್ಷಗಳ ಹಿಂದೆ ಪವನ್‌ ಪೋಷಕರೂ ಮಂತ್ರ ಮಾಂಗಲ್ಯದ ಮೂಲಕ ಶಾಲೆಯ ಜಗುಲಿಯ ಮೇಲೆ ಮದುವೆಯಾಗಿದ್ದರು. ಅದೇ ರೀತಿ ಪವನ್ ಸಹ ಸರಳವಾಗಿ ವಿವಾಹವಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com