ತೈಮೂರ್‌ಗಾಗಿ ಭರ್ಜರಿ ಗಿಫ್ಟ್‌ ನೀಡಿದ ಸೈಫ್‌ ಅಲಿ ಖಾನ್‌…ಬೆಲೆ ಎಷ್ಟು ಅಂತ ಕೇಳಿದ್ರೆ ಹುಬ್ಬೇರಿಸ್ತೀರಾ..!!

ಮುಂಬೈ : ಮಕ್ಕಳ ದಿನಾಚರಣೆಯ ಪ್ರಯುಕ್ತ ಸಾಮಾನ್ಯವಾಗಿ ಮಕ್ಕಳಿಗೆ ತಂದೆ ಅಥವಾ ತಾಯಿ  ಚಾಕೊಲೇಟ್‌ ಅಥವಾ ಅವರಿಗಿಷ್ಟವಾದ ಗಿಫ್ಟ್ ನೀಡುವುದು ಸಾಮಾನ್ಯ. ಆದರೆ ಈಬಾರಿಯ ಮಕ್ಕಳ ದಿನಾಚರಣೆಯ ಪ್ರಯುಕ್ತ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಹಾಗೂ ಕರೀನಾ ಕಪೂರ್ ದಂಪತಿ ತಮ್ಮ ಮಗ ತೈಮೂರ್‌ ಅಲಿ ಖಾನ್‌ಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಹೌದು ಮಗ ತೈಮೂರ್‌ಗೆ ಸೋಮವಾರ ಸೈಫ್‌ ಅಲಿ ಖಾನ್‌ ಬರೋಬ್ಬರಿ 1.30 ಕೋಟಿ ರೂನ ಕೆಂಪು ಬಣ್ಣದ ಸ್ವಾಂಕಿ ಜೀಪ್‌ ಗ್ರ್ಯಾಂಡ್‌  ಕೆರೋಕಿ ಎಸ್‌ಆರ್‌ಟಿ ಕಾರನ್ನು ಖರೀದಿಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸೈಫ್, ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಈ ಕಾರನ್ನು ತೈಮೂರ್‌ಗೆ ಉಡುಗೊರೆಯಾಗಿ ನೀಡಿದ್ದೇವೆ. ಮಕ್ಕಳ ಸುರಕ್ಷತೆ ಬಹಳ ಮುಖ್ಯ. ಈ ಜೀಪಿನಲ್ಲಿ ಹೆಚ್ಚಿನ ಸುರಕ್ಷಾ ಫೀಚರ್‌ಗಳಿವೆ. ಹಿಂಬದಿಯಲ್ಲಿ ಮಗುವಿಗಾಗಿ ಬೇಬಿ ಸೀಟ್‌ ಇದೆ. ತೈಮೂರ್‌ ತನ್ನ ಮೊದಲ ಡ್ರೈವ್‌ ಮಾಡುವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇವೆ. ತೈಮೂರ್‌ಗೆ ಕೆಂಪು ಬಣ್ಣ ಎಂದರೆ ಬಹಳ ಇಷ್ಟ. ಆದ್ದರಿಂದ ಈ ಕಾರು ಅವನಿಗೆ ಇಷ್ಟವಾಗುತ್ತದೆ ಎಂದಿದ್ದಾರೆ.

Leave a Reply

Your email address will not be published.