I support ramesh kumar : ಸೋಶಿಯಲ್‌ ಮೀಡಿಯಾದಲ್ಲಿ ರಮೇಶ್‌ ಕುಮಾರ್‌ಗೆ ಹೆಚ್ಚುತ್ತಿದೆ ಬೆಂಬಲ

ಖಾಸಗಿ ವೈದ್ಯಕೀಯ ಸಂಸ್ಥೆಗಳ ವೈದ್ಯರು ಸರ್ಕಾರದ ವಿರುದ್ದ ತೊಡೆತಟ್ಟಿ ನಿಂತಿದ್ದಾರೆ. ಪರಿಣಾಮ ಬಡ ರೋಗಿಗಳು ಪಡಬಾರದ ಪಾಡು ಪಡುತ್ತಿದ್ದಾರೆ. ನಿಜವಾಗಿಯೂ ಖಾಸಗಿ ವೈದ್ಯರು ಪ್ರತಿಭಟನೆ ಮಾಡುವಂತಹ ವಿಷಯವಾದರೂ ಏನಿದೆ ಎಂಬುದು ತಿಳಿಯುತ್ತಿಲ್ಲ ಎಂದು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಯಲ್ಲಿರುವ ಅಂಶಗಳು ಇವು.

1) ಖಾಸಗಿ ಆಸ್ಪತ್ರೆಗಳಲ್ಲಿ ದೊರಕುವ ಚಿಕಿತ್ಸೆಗೆ ಬೇಕಾಬಿಟ್ಟಿ ದರ ವಿಧಿಸಿ ಬಡವ ಶ್ರೀಮಂತರೆನ್ನದೆ ಹಣ ಕೀಳುವ ಆಸ್ಪತ್ರೆಗಳು ಇನ್ನು ಮುಂದೆ ಯಾವ ಚಿಕಿತ್ಸೆಗೆ ಯಾವ ದರ ಅಂತ ಸರ್ಕಾರ ನಿಗಧಿಪಡಿಸಿದ ದರ ಆಸ್ಪತ್ರೆಗಳ ರಿಸೆಪ್ಷನ್ ಹಾಲ್‌ನಲ್ಲಿ ಹಾಕಬೇಕು.

2) ಎಲ್ಲಾ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ಏಕ ರೂಪದ ಚಿಕಿತ್ಸೆ ದರ ಅನುಸರಿಸಬೇಕು.

3) ರೋಗಿಗೆ ತಾನು ಪಡೆಯಲು ಬಯಸುವ ಚಿಕಿತ್ಸೆಯ ಸಂಪೂರ್ಣ ಚಿಕಿತ್ಸೆಯ ಮುನ್ನ ಬೆಡ್ ಚಾರ್ಜ್, ಚಿಕಿತ್ಸೆಯ ವೆಚ್ಚ ಹಾಗು ಔಷಧಿಯ ವೆಚ್ಚದ ಎಸ್ಟಿಮೇಟ್ ಕಾಪಿ ನೀಡಬೇಕು.

4) ಎಮರ್ಜೆನ್ಸಿ ವೇಳೆ ಹಣ ಪಾವತಿಗೆ ಒತ್ತಾಯಿಸುವಂತಿಲ್ಲ.

5) ವೈದ್ಯರು ಇನ್ನು ಮುಂದೆ ರೋಗಿಗೆ ಬರೆಯುವ ಔಷಧಿಗಳ ಹೆಸರನ್ನು ಹಾಗು ಚಿಕಿತ್ಸೆ ಕೊಡುತ್ತಿರುವ ವಿಷಯದ ಕುರಿತು ರೋಗಿಗೆ ಅರ್ಥವಾಗುವ ಹಾಗೆ ಬರೆಯಬೇಕು.

6) ರೋಗಿಯು ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ ಸಂದರ್ಭದಲ್ಲಿ ಬಿಲ್ ಪಾವತಿಗಾಗಿ ಸಂಬಂಧಿಕರಿಗೆ ಹಿಂಸಿಸಬಾರದು ಹಾಗೂ ಬಿಲ್ ಪಾವತಿಯಾಗದೆ ಶವ ಕೊಡಲು ನಿರಾಕರಿಸುವಂತಿಲ್ಲ.

7) ರೋಗಿಯ ಖಾಸಗಿತನ ಕಾಪಾಡಬೇಕು .

8) ವೈದ್ಯರು ಯಾವುದೇ ನಿರ್ಧಾರಕ್ಕೂ ಮುನ್ನ ರೋಗಿಯ ಸಂಬಂಧಿಕರ ಒಪ್ಪಿಗೆ ಪಡೆಯಬೇಕು.

9) ಇನ್ನು ಮುಂದೆ ಪ್ರಾರಂಭವಾಗುವ ಖಾಸಗಿ ಲ್ಯಾಬ್ ಗಳು ಸರ್ಕಾರಿ ಆಸ್ಪತ್ರೆಯಿಂದ 200 ಮಿಟರ್ ದೂರದಲ್ಲಿ ಇರಬೇಕು.

ಖಾಸಗಿ ಆಸ್ಪತ್ರೆಗಳು ಬಡವರು ಶ್ರೀಮಂತರೆನ್ನದೆ ರೋಗಿಗಳಿಂದ ಹಣ ಕೀಳವ ದಂಧೆ ನೆಡೆಸುತ್ತಿರುವ ಈ ಸಂದರ್ಭದಲ್ಲಿ ಅವರ ಹೆಡೆಮುರಿ ಕಟ್ಟಲು ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವುದು ತಪ್ಪಲ್ಲ ಎಂಬುದು ಸಾರ್ವಜನಿರ ಅಭಿಪ್ರಾಯವಾಗಿದೆ. ಅಲ್ಲದೆ ಸಚಿವ ರಮೇಶ್‌ ಕುಮಾರ್ ಅವರ ಆಲೋಚನೆಗಳು ಜನಪರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ I support Ramesh kumar ಎಂಬ ಪೇಜ್‌ ವೈರಲ್‌ ಆಗಿದೆ.

 

Leave a Reply

Your email address will not be published.