Adult ಸಿನಿಮಾ ನೋಡುವಾಗ ಸಿಕ್ಕಿಬಿದ್ದಿದ್ದ ಗೋವಾ ಸಿಎಂ ಪರ್ರಿಕ್ಕರ್‌..?!!

ಪಣಜಿ : ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಗೋವಾ ಸಿಎಂ ಮನೋಹರ್‌ ಪರ್ರಿಕ್ಕರ್‌ ತಾವು ಮೊಟ್ಟ ಮೊದಲ ಬಾರಿಗೆ ನೋಡಿದ ವಯಸ್ಕರ ಸಿನಿಮಾದ ಕುರಿತ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಸಂವಾದದಲ್ಲಿ ಮಾತನಾಡಿದ ಪರ್ರಿಕ್ಕರ್‌ ಅವರಿಗೆ ವಿದ್ಯಾರ್ಥಿಯೊಬ್ಬ ನೀವು ಯುವಕರಾಗಿದ್ದಾಗ ಯಾವ ರೀತಿಯ ಸಿನಿಮಾ ನೋಡುತ್ತಿದ್ದಿರಿ ಎಂದು ಕೇಳಿದ್ದಾನೆ. ಅದಕ್ಕೆ ಪರ್ರಿಕ್ಕರ್‌ ನಾನು ಕೇವಲ ಸಿನಿಮಾ ಮಾತ್ರವಲ್ಲ ಅದರ ಜೊತೆ ವಯಸ್ಕರ ಸಿನಿಮಾಗಳನ್ನೂ ನೋಡುತ್ತಿದ್ದೆ ಎಂದಿದ್ದಾರೆ.
ನಾನು ಯುವಕನಾಗಿದ್ದ ವೇಳೆ ಪಾಪ್ಯುಲರ್ ಆದ ಅಡಲ್ಟ್‌ ಸಿನಿಮಾ ಬಂದಿತ್ತು. ನಾನು ಹಾಗೂ ನನ್ನ ಸಹೋದರ ಇಬ್ಬರೂ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿದ್ದೆವು. ಇಂಟರ್‌ವಲ್‌ ಸಮಯದಲ್ಲಿ ಲೈಟ್ ಆನ್‌ ಮಾಡಿದಾಗ ನಮ್ಮ ಪಕ್ಕ ನಮ್ಮ ನೆರೆ ಮನೆಯ ವ್ಯಕ್ತಿಯೊಬ್ಬರು ಕುಳಿತಿದ್ದರು. ಅವರನ್ನು ನೋಡಿದ ಕೂಡಲೆ ಸಿನಿಮಾವನ್ನು ಅರ್ಧಕ್ಕೇ ಬಿಟ್ಟು ಮನೆಗೆ ಓಡಿದ್ದೆವು ಎಂದಿದ್ದಾರೆ.

ದಾರಿ ಮಧ್ಯೆಯೇ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ನಡೆಸಿದ್ದೆವು. ಮನೆಗೆ ಹೋದ ಮೇಲೆ ನಾವು ನಮ್ಮ ತಾಯಿಯ ಜೊತೆ ಇಂದು ನಾವು ಸಿನಿಮಾಗೆ ಹೋಗಿದ್ದೆವು. ಆದರೆ ಅದು ಯಾವ ಸಿನಿಮಾ ಎಂದು ನಮಗೆ ಗೊತ್ತಿರಲಿಲ್ಲ. ಅಲ್ಲಿಗೆ ಹೋದ ಮೇಲೆ ಅದು ಕೆಟ್ಟ ಸಿನಿಮಾ ಎಂದು ತಿಳಿಯಿತು. ಕೂಡಲೆ ಸಿನಿಮಾ ನೋಡುವುದನ್ನು ಬಿಟ್ಟು ಅರ್ಧಕ್ಕೆ ಬಂದು ಬಿಟ್ಟೆವು ಎಂದು ಸುಳ್ಳು ಹೇಳಿದ್ದಾಗಿ ಅನುಭವವವನ್ನು ಹಂಚಿಕೊಂಡಿದ್ದಾರೆ.
ಜೊತೆಗೆ ನೆರೆ ಮನೆಯ ವ್ಯಕ್ತಿಯೂ ಸಿನಿಮಾ ನೋಡಲು ಬಂದಿದ್ದರು ಎಂದು ಹೇಳಿದ್ದೆವು. ಮರುದಿನ ನಮ್ಮ ತಾಯಿಯನ್ನು ಕರೆದು ನಿಮ್ಮ ಮಕ್ಕಳಿಬಬ್ರು ಸಿನಿಮಾ ನೋಡಲು ಬಂದಿದ್ದರು ಎಂದ ಕೂಡಲೆ ನಮ್ಮ ತಾಯಿ ಮಕ್ಕಳು ಯಾವ ಸಿನಿಮಾಗೆ ಹೋಗಿದ್ದರು ಎಂದು ನನಗೆ ಗೊತ್ತಿದೆ. ನೀವ್ಯಾಕೆ ಅಂತಹ ಸಿನಿಮಾ ನೋಡಲು ಹೋಗಿದ್ದಿರಿ ಎಂದು ಕೇಳಿದ್ದರು. ಅದರಿಂದ ಆ ವ್ಯಕ್ತಿ ತಲೆತಗ್ಗಿಸಿ ನಡೆಯುನವಂತಾಗಿತ್ತು ಎಂದು ಪರಿಕ್ಕರ್‌ ಜೋರಾಗಿ ನಗುತ್ತಾ ತಮ್ಮ ಬಾಲ್ಯದ ನೆನಪನ್ನು ಬಿಚ್ಚಿಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com