ಸವಲತ್ತುಗಳು ಬೇಕಾ ? ಹಾಗಾದರೆ ಏಸು ಪೋಟೊ ತೆಗೆದು ಅಲ್ಲಿ ಜಿನ್‌ ಪಿಂಗ್ ಫೊಟೊ ಹಾಕಿ ಎಂದ ಚೀನಾ ಸರ್ಕಾರ

ಬೀಜಿಂಗ್ : ಸರ್ಕಾರದ ಸವಲತ್ತುಗಳು ಬೇಕಾದರೆ ಮೊದಲು ನಿಮ್ಮ ಮನೆಯ ಗೋಡೆಯಲ್ಲಿರುವ ಏಸು ಕ್ರಿಸ್ತನ ಫೋಟೊ ತೆಗೆದು ಹಾಕಿ ಆ ಜಾಗದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಫೋಟೊ ಹಾಕಿಕೊಳ್ಳುವಂತೆ ಚೀನಾ ಸರ್ಕಾರ ಆದೇಶಿಸಿದೆ.

ಅಲ್ಲದೆ ಏಸು ಕ್ರಿಸ್ತ ನಿಮ್ಮನ್ನು ಬಡತನದಿಂದ ಹೊರಗೆ ತರುವುದಿಲ್ಲ. ಚೀನಾದ ಕಮ್ಯುನಿಸ್ಟ್ ಪಕ್ಷ ಮಾತ್ರ ನಿಮ್ಮ ಬಡತನವನ್ನು ನಿವಾರಣೆ ಮಾಡುತ್ತದೆ. ನಿಮ್ಮನ್ನು ಸಿರಿವಂತರನ್ನಾಗಿ ಮಾಡುತ್ತದೆ. ನಿಮ್ಮೆಲ್ಲ ಇಷ್ಟ ಕಷ್ಟಗಳನ್ನು ಕೇಳುತ್ತದೆ. ಅದಕ್ಕೆ ನೀವು ನಿಮ್ಮ ಮನೆಯ ಗೋಡೆಯ ಮೇಲಿನ ಏಸು ಕ್ರಿಸ್ತನ ಫೋಟೊ ತೆಗೆದು ಹಾಕಿ ಕ್ಸಿ ಜಿನ್‌ ಪಿಂಗ್ ಅವರ ಫೋಟೊ ಹಾಕಿಕೊಳ್ಳಿ ಎಂದು ಸೂಚಿಸಲಾಗಿದೆ.

ಅಂಕಿ ಅಂಶಗಳ ಪ್ರಕಾರ ಚೀನಾದಲ್ಲಿ ಶೇ.11 ಮಂದಿ ಬಡತನದಲ್ಲಿದ್ದಾರೆ. ಅವರಲ್ಲಿ ಶೇ. 10 ಮಂದಿ ಕ್ರಿಶ್ಚಿಯನ್ನರಾಗಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಸರ್ಕಾರ ಕ್ರಿಶ್ಚಿಯನ್ನರೇ ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮನೆಯಲ್ಲಿರುವ ಏಸುವಿನ ಫೊಟೊ ತೆಗೆದು ಹಾಕಿ ಅಧ್ಯಕ್ಷರ ಫೋಟೊ ಹಾಕಿಕೊಳ್ಳುವಂತೆ ಸೂಚಿಸಿದೆ.

ಸರ್ಕಾರದ ಸೂಚನೆಯ ಮೇರೆಗೆ ಈಗಾಗಲೆ 624 ಕ್ರಿಶ್ಚಿಯನ್ ಕುಟುಂಬಗಳು ಏಸುವಿನ ಫೋಟೊ ತೆಗೆದುಹಾಕಿದ್ದು, ಕ್ಸಿ ಜಿನ್‌ ಪಿಂಗ್ ಫೊಟೋಗಳನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published.