ವಿದ್ಯಾರ್ಥಿನಿಯನ್ನು10 ದಿನ ಲಾಡ್ಜ್ನಲ್ಲಿ ಕೂಡಿಹಾಕಿ ನಾಲ್ವರಿಂದ ನಿರಂತರ ಅತ್ಯಾಚಾರ
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಯುವತಿಯೊಬ್ಬಳನ್ನು ಪಾರ್ಟಿಯ ನೆಪದಲ್ಲಿ ಕರೆದು ಬಳಿಕ ಆಕೆಯನ್ನು ಕೂಡಿ ಹಾಕಿ 10 ದಿನಗಳ ಕಾಲ ಅತ್ಯಾಚಾರ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಕಾಡುಗೋಡಿಯ ಕ್ಲಾಸಿಕ್ ಇನ್ ಲಾಡ್ಜ್ನಲ್ಲಿ ಘಟನೆ ನಡೆದಿದೆ. ಸಂತ್ರಸ್ತ ಯುವತಿ ನಗರದ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಆಕೆಯ ಸಹಪಾಟಿಗಳೇ ಪಾರ್ಟಿ ನೆಪದಲ್ಲಿ ಕಾಡುಗೋಡಿಯ ಹೊಟೆಲ್ಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾರೆ. ಕಾಮುಕರನ್ನು ರಾಘವೇಂದ್ರ, ಪಶ್ಚಿಮ ಬಂಗಾಳ ಮೂಲದ ಮನೋರಾಜನ್ ಪಂಡಿತ್, ಸಾಗರ್, ಮಂಜುರಾಜ್ ಎಂದು ಗುರುತಿಸಲಾಗಿದೆ.
ಯುವತಿಯನ್ನು 10 ದಿನಗಳ ಕಾಲ ಲಾಡ್ಜ್ನಲ್ಲೇ ಕೂಡಿಹಾಕಿ ನಾಲ್ವರು ನಿರಂತರ ಅತ್ಯಾಚಾರವೆಸಗಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಲಾಡ್ಜ್ ಮಾಲೀಕ ಸೇರಿದಂತೆ ಐವರನ್ನು ಬಂಧಿಸಲಾಗಿದೆ.