ಅಕ್ರಮ ಗಣಿಗಾರಿಕೆಗೆ ನಿಷೇಧ ಹೇರಿಕೆ : DC ಎದುರಲ್ಲೇ ಅಧಿಕಾರಿಗೆ ಬೆದರಿಕೆ ಒಡ್ಡಿದ ಪುಟ್ಟರಾಜು

ಡಿಸಿ ಎದುರೇ ಅಧಿಕಾರಿಗೆ ಸಂಸದರು ಬೆದರಿಕೆ ಹಾಕಿ, ಏಕವಚನ ಪ್ರಯೋಗ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜೆಡಿಎಸ್ ಸಂಸದ ಸಿ.ಎಸ್. ಪುಟ್ಟರಾಜು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗಭೂಷಣ್ ಗೆ ಡಿಸಿ ಸಮಕ್ಷಮದಲ್ಲಿಯೇ ಬೆದರಿಕೆ ಹಾಕಿದ್ದಾರೆ. ಡಿಸಿ ಮಂಜುಶ್ರೀ ಸ್ಥಳದಲ್ಲೇ ಇದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

‘ ಏಯ್ ಏನ್ ಮಾಡ್ತೀಯಾ ಇಲ್ಲಿ..? ನಿನ್ನನ್ನ ಸುಲಭವಾಗಿ ಬಿಡ್ತೀವಾ. ಎಷ್ಟು ಸಾವಿರ ಜನರನ್ನು ಕರೆಸಬೇಕೋ ಕರಿಸ್ತೀನಿ. ಎಂದು ಗಣಿ ಮಾಲೀಕರ ಪರವಾಗಿ ಸಂಸದ ಬೆದರಿಕೆ ಹಾಕಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿಯನ್ನು ಬಂದ್ ಮಾಡುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಬೇಬಿ ಬೆಟ್ಟ, ಚಿನಕುರಳಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸಿದ್ದಕ್ಕೆ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗಿದೆ.

ಜಿಲ್ಲಾಧಿಕಾರಿ ಮಂಜುಶ್ರೀ ಎರಡು ತಿಂಗಳ ನಿಷೇಧ ಹೇರಿದ್ದರು. ಸಂಸದರ ಗಣಿಯೂ ಬಂದ್ ಆದ ಹಿನ್ನಲೆಯಲ್ಲಿ ಬೆದರಿಕೆ ಒಡ್ಡಿದ್ದಾರೆ. ಪರಿಸರ ಇಲಾಖೆಯ ಸಿ ಫಾರಂ ಹಾಗೂ ಅಕ್ರಮದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಬಂದ್ ಮಾಡಿಸಿದೆ. ಮಾಲೀಕರನ್ನು ಡಿಸೀ ಕಚೇರಿಗೆ ಕರೆತಂದಿದ್ದ ಸಂಸದ. ಡಿಸಿ, ಅಪರ ಡಿಸಿ, ಇಬ್ಬರು ಎಸಿ ಗಳ ಸಮ್ಮುಖದಲ್ಲೇ ಬೆದರಿಕೆ ಹಾಕಿದ್ದಾರೆ. ಹೇರಿಕೆ ಮಾಡಿರುವ ನಿಷೇದಾಜ್ಞೆ ಹಿಂಪಡೆಯಲು ಒತ್ತಡ ಹೇರಿದ್ದಾರೆ. ಒತ್ತಡಕ್ಕೆ ಮಣಿಯದಕ್ಕೆ ಅಧಿಕಾರಿಗಳಿಗೆ ಧಮಕಿ ಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com