ಜಾಹಿರಾತಿನಿಂದ ಕೈಬಿಡುವಂತೆ ಉದ್ಯಮಿಗಳ ಮೇಲೆ ಬಲಪಂಥೀಯರು ಒತ್ತಡ – ಪ್ರಕಾಶ್ ರೈ

ಬೆಂಗಳೂರು : ನಾನು ನಟಿಸುವ ಜಾಹಿರಾತುಗಳಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರೆಸದಂತೆ ಬಲಪಂಥೀಯರು ಸಂಸ್ಥೆ ಮಾಲೀಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬಹುಭಾಷ ನಟ, ಕನ್ನಡಿಗರ ಪ್ರಕಾಶ್ ರೈ ಹೇಳಿದ್ದಾರೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪ್ರಕಾಶ್ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಡಿದ್ದರು.. ಅದಕ್ಕಾಗಿ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು..

ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ಪ್ರಕಾಶ್ ರೈ ಈ ಆರೋಪ ಮಾಡಿದ್ದಾರೆ. ಈ ತನಕ ಬಾಲಿವುಡ್ ತಾರೆಯರಾದ ಅಮೀರ್ ಖಾನ್, ಶಾರುಕ್ ಖಾನ್ ಅನುಭವಿಸುತ್ತಿದ್ದ ಈ ` ಬ್ಯಾನ್ ‘ ಬೇನೆಗೆ ಪ್ರಕಾಶ್ ರೈ ಸಹ ಒಳಪಟ್ಟಂತಾಗಿದೆ.

ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೆ. ಏನನ್ನೋ ಟೀಕಿಸಿದರೆ ಮತ್ಯಾರನ್ನೋ ಟೀಕಿಸುತ್ತಿದ್ದಾರೆ ಎಂದು ಭಾವಿಸಿ ವೈಯಕ್ತಿಕ ದಾಳಿ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇನ್ನು ಮುಂದುವರೆದು, ನಾನು ನಟಿಸುತ್ತಿರುವ ಜಾಹಿರಾತುಗಳಿಂದ ನನ್ನನ್ನು ಕೈಬಿಡುವಂತೆ ಆಯಾ ಕಂಪನಿ ಮಾಲೀಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದನ್ನು ಸಂಸ್ಥೆ ಮಾಲೀಕರೇ ತಿಳಿಸಿ, ನಾವು ನಿಮ್ಮ ಜೊತೆಗಿದ್ದೇವೆ ಎಂದಿದ್ದಾರೆ ಎಂಬ ವಿಷಯವನ್ನು ಸಹ ಪ್ರಕಾಶ್ ರೈ ಸ್ಪಷ್ಟಪಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com