ಕೆಲ ಪೋಲೀಸರಿಂದಲೇ Drugs ದಂಧೆಗೆ ಕುಮ್ಮಕ್ಕು ಸಿಗುತ್ತಿದೆ : ಸಿ ಎಂ ಇಬ್ರಾಹಿಂ

ವಿಧಾನ ಪರಿಷತ್ ನಲ್ಲಿ ಡ್ರಗ್ಸ್ ದಂಧೆಯ ಬಗ್ಗೆ ಸಿ.ಎಂ.ಇಬ್ರಾಹಿಂ ಮಾತನಾಡಿ ‘ ಬೇಲಿಯೇ ಎದ್ದು ಹೊಲೆ ಮೇಯ್ದರೆ ಏನ್ ಮಾಡೋದು. ಕೆಲ ಪೊಲೀಸರಿಂದಲೇ ಇದಕ್ಕೆ ಕುಮ್ಮಕ್ಕು ಸಿಗುತ್ತಿದೆ. ಇದನ್ನ ನಿಯಂತ್ರಣ ಮಾಡಿದ್ರೆ ಅರ್ಧ ಸಮಸ್ಯೆ ಮುಗಿದಂತೆ. ಸಿಇಟಿ, ಅದು ಇದು ಅಂತ ಉತ್ತರ ಭಾರತದಿಂದ ಬಂದ ಜನರಿಂದ ಈ ರೋಗ ನಮಗೆ ಬಂದಿದೆ. ಸರ್ಕಾರ ಒಂದು ನಿಯಮ ತರಬೇಕು. ಸಿಇಟಿ ಸೀಟ್ ತೆಗೆದುಕೊಳ್ಳುವಾಗ ಅವನಿಗೆ ಮೆಡಿಕಲ್ ಚೆಕ್ ಮಾಡಿ ಸೇರಿಸಿಕೊಳ್ಳಿ. ಉತ್ತರ ಭಾರತದ ವಿದ್ಯಾರ್ಥಿಗಳಿಗೆ  ರಕ್ತ ಪರೀಕ್ಷೆ ಮಾಡಿ ಸೀಟು ಕೊಡಿ ‘ ಎಂದು ಹೇಳಿದ್ದಾರೆ.

ಮಾದಕ ವ್ಯಸನಿ ಅನ್ನೋದಾದ್ರೆ ಅವನಿಗೆ ಸೀಟ್ ಕೊಡಬೇಡಿ. ಆಗ 60% ಸಮಸ್ಯೆ ಪರಿಹಾರ ಆಗುತ್ತೆ. ನನ್ನ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ನಾನೇ ಬ್ಲಡ್ ಟೆಸ್ಟ್ ಮಾಡಿಸುತ್ತಿದ್ದೇನೆ. ಈ ನಿಯಮ ಜಾರಿಗೆ ತಂದಿದ್ದೇನೆ ಎಂದು ತಮ್ಮ ಕಾಲೇಜ್ ಉದಾಹರಣೆ ಕೊಟ್ಟರು.

‘ ಡ್ರಗ್ಸ್ ದಂಧೆಯಲ್ಲಿ ಸಿಕ್ಕವನಿಗೆ ಮೂರೇ ದಿನಗಳಲ್ಲಿ ಮರಣ ದಂಡನೆ ನೀಡಿ ನೇಣಿಗೆ ಹಾಕಬೇಕು. ಅವಾಗ ಇಂತಹ ದಂಧೆಗೆ ಕಡಿವಾಣ ಹಾಕಬಹುದು ‘ ತಮ್ಮ ಹಾಸ್ಯಭರಿತ ಭಾಷಣದಿಂದ ಸರ್ಕಾರಕ್ಕೆ ಸಿ.ಎಂ ಇಬ್ರಾಹಿಂ ಸಲಹೆ ಕೊಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com