ಪ್ರೀತಿಸಲಿಲ್ಲ ಎಂದು ಯುವತಿ ಹಾಗೂ ಮನೆಯವರಿಗೆ ಬೆಂಕಿ ಹಚ್ಚಿದ ವಿಕೃತ ಪ್ರೇಮಿ …

ಚೆನ್ನೈ : ಯುವತಿ ತನ್ನನ್ನು ಪ್ರೀತಿಸಲು ನಿರಾಕರಸಿದಳು ಎಂಬ ಕಾರಣಕ್ಕೆ ಭಗ್ನ ಪ್ರೇಮಿಯೊಬ್ಬ ಯುವತಿ ಸೇರಿದಂತೆ ಆಕೆಯ ಮನೆಯವರಿಗೂ ಬೆಂಕಿಯಿಟ್ಟ ಕೃತ್ಯ ತಮಿಳನಾಡಿನ ಆಡಂಬಾಕಂ ಪ್ರದೇಶದ ಎಜಿಎಸ್ ಕಾಲೋನಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಜನಿಯರಿಂಗ್ ವಿದ್ಯಾರ್ಥಿ 23 ವರ್ಷದ ಆಕಾಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಆಕಾಶ್ ಯುವತಿಯನ್ನು ಹಿಂಬಾಲಿಸುತ್ತಿದ್ದು, ಯುವತಿಯ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ, ಆತನನ್ನು ಪ್ರೀತಿಸಲು ಯುವತಿ ನಿರಾಕರಿಸಿದ್ದಳು.

ಸೋಮವಾರ ರಾತ್ರಿ ಯುವತಿಯ ಮನೆಗೆ ತೆರಳಿದ ಆಕಾಶ್, ಯುವತಿಯೊಂದಿಗೆ ಮಾತನಾಡಬೇಕು ಎಂದು ಪಟ್ಟು ಹಿಡಿದಿದ್ದ. ಆದರೆ, ಯುವತಿ ಮನೆಯವರು ಬಾಗಿಲು ತೆಗೆಯಲು ನಿರಾಕರಿಸಿದ್ದರು. ಒಂದೇ ನಿಮಿಷ ಯುವತಿ ಜತೆ ಮಾತನಾಡುವುದಾಗಿ ಅಂಗಲಾಚಿದ ಹಿನ್ನಲೆಯಲ್ಲಿ ಮನೆಯವರು ಬಾಗಿಲು ತೆರೆದಿದ್ದಾರೆ. ತಕ್ಷಣ ಆಕಾಶ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗುತ್ತಿದೆ.

ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಯುವತಿ ಇಂದು ಬೆಳಗ್ಗೆ ಕಿಲ್‌ಪೌಕ್ ಆಸ್ಪತ್ರೆಯಲ್ಲಿ ಕೊನೆಯುಸಿಳೆದಿದ್ದಾಳೆ. ಯುವತಿ ತಾಯಿ ಹಾಗೂ ತಂಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ಆಕಾಶ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.