WATCH : ತಾನೇ ಅಮರೇಂದ್ರ ಬಾಹುಬಲಿ ಅಂದುಕೊಂಡ..ಆನೆ ಬಳಿ ಹೋದ..ಮುಂದೇನಾಯ್ತು.?

ಬ್ಲಾಕ್ ಬಸ್ಟರ್ ಬಾಹುಬಲಿ 2 ಚಿತ್ರದಲ್ಲಿ ನಟ ಪ್ರಭಾಸ್ ಮಾಡಿರುವ ಸಾಹಸಮಯ ದೃಶ್ಯಗಳನ್ನು ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತೀರಿ. ಬಾಹುಬಲಿ 2 ಚಿತ್ರದಲ್ಲಿ ಅಮರೇಂದ್ರ ಪಾತ್ರದಲ್ಲಿ ಅಭಿನಯಿಸಿರುವ ಪ್ರಭಾಸ್, ಆನೆಯ ಸೊಂಡಿಲಿನ ಮೇಲೇರುವ ಸಾಹಸಮಯ ದೃಶ್ಯವೊಂದನ್ನು ಅದ್ಭುತವಾಗಿ ತೋರಿಸಲಾಗಿದೆ.

ಶೂಟಿಂಗ್ ಸಂದರ್ಭದಲ್ಲಿ ಅಪಾರ ಎಚ್ಚರಿಕೆ ವಹಿಸಲಾಗಿರುತ್ತದೆ. ಜೊತೆಗೆ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಬಳಸಿ ಬಳಸಿ ಎಡಿಟ್ ಮಾಡಿರುವ ದೃಶ್ಯಗಳನ್ನು ಸಿನಿಮಾ ಪರದೆಯ ಮೇಲೆ ನಮಗೆಲ್ಲ ತೋರಿಸಲಾಗುತ್ತದೆ.

ಆದರೆ ನಿಜ ಜೀವನದಲ್ಲಿ ಆ ಸಾಹಸಕ್ಕೆ ಕೈ ಹಾಕಿದರೆ ಏನಾಗಬಹುದು. ಕೇರಳದಲ್ಲಿ ಒಬ್ಬ ವ್ಯಕ್ತಿ ಕುಡಿದ ನಶೆಯಲ್ಲಿ ತನ್ನನ್ನು ತಾನು ಅಮರೇಂದ್ರ ಬಾಹುಬಲಿ ಎಂದು ಭಾವಿಸಿದನೋ ಏನೋ..? ಆನೆಯ ಸೊಂಡಿಲಿಗೆ ಮುತ್ತಿಡಲು ಹೋಗಿದ್ದಾನೆ.

ಸ್ನೇಹಿತನ ಎಚ್ಚರಿಕೆಯನ್ನು ಲೆಕ್ಕಿಸದೆ ಆನೆಯೊಂದಿಗೆ ಸಲುಗೆ ಬೆಳೆಸಲು ಹೋಗಿದ್ದಾನೆ. ಈತನ ಹುಚ್ಚಾಟದಿಂದ ಆನೆ ಕೋಪಗೊಂಡಿದೆ. ಅದರ ಸೊಂಡಿಲಿನ ಹೊಡೆತಕ್ಕೆ ವ್ಯಕ್ತಿ ಗಾಳಿಯಲ್ಲಿ ಹಾರಿ, ದೂರ ಹೋಗಿ ಬಿದ್ದಿದ್ದಾನೆ. ತೀವ್ರವಾಗಿ ಗಾಯಗೊಂಡ ಈತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com