ಶ್ರೀಶ್ರೀ ರವಿಶಂಕರ್ Irresponsible : ನಟಿ ಸೋನಮ್ ಕಪೂರ್ ಹೀಗೆ ಹೇಳಿದ್ದೇಕೆ..?

ಆರ್ಟ್ ಆಫ್ ಲಿವಿಂಗ್ ನ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ‘ ಸಲಿಂಗಕಾಮ ಎನ್ನುವುದು ಒಂದು ರೀತಿಯ ತಾತ್ಕಾಲಿಕ ಪ್ರವೃತ್ತಿಯಾಗಿದ್ದು, ಶಾಶ್ವತವಾದದ್ದಲ್ಲ ‘ ಎಂದು ರವಿಶಂಕರ್ ಗುರೂಜಿ ನವದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾನಿಲಯದಲ್ಲಿ ಹೇಳಿದ್ದಾರೆ.

Image result for sonam kapoor ravishankar

ಜೆಎನ್ ಯು ದಲ್ಲಿ ನೆಹರೂ ಸ್ಮರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರವಿಶಂಕರ್ ಅವರಿಗೆ ವಿದ್ಯಾರ್ಥಿಯೊಬ್ಬ ‘ ನನ್ನ ಸಲಿಂಗ ಕಾಮಿಯಾದ ಕಾರಣ ಸ್ನೇಹಿತರು ಹಾಗೂ ಕುಟುಂಬದವರು ನನ್ನೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಇದನ್ನು ಹೇಗೆ ನಿಭಾಯಿಸಬೇಕು..?’ ಎಂದು ಕೇಳಿದ್ದಾನೆ. ಆತ ಕೇಳಿದ ಪ್ರಶ್ನೆಗೆ ರವಿಶಂಕರ್ ‘ ಅದು ಕೇವಲ ತಾತ್ಕಾಲಿಕ ಪ್ರವೃತ್ತಿ ಅಷ್ಟೇ, ಶಾಶ್ವತವಾದದ್ದಲ್ಲ. ಈ ಪ್ರವೃತ್ತಿ ಮುಂದೆ ಬದಲಾಗಬಹುದು. ಎಷ್ಟೊ Gay ವ್ಯಕ್ತಿಗಳು ನಂತರ ಸಹಜವಾಗಿದ್ದನ್ನು ನಾನು ನೋಡಿದ್ದೇನೆ. ಮೊದಲು ಸಹಜವಾಗಿದ್ದು ನಂತರ ಗೇ ಆಗಿ ಪರಿವರ್ತನೆ ಹೊಂದಿದವರನ್ನೂ ಸಹ ನಾನು ನೋಡಿದ್ದೇನೆ ‘ ಎಂದು ಉತ್ತರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನಿಡಿರುವ ಬಾಲಿವುಡ್ ನಟಿ ಸೋನಮ್ ಕಪೂರ್ ‘ ಸಮಲೈಂಗಿಕತೆ ಎನ್ನುವುದು ಪ್ರವೃತ್ತಿಯಲ್ಲ. ಹುಟ್ಟಿನಿಂದಲೇ ಬರುವಂತಹ ಭಾವನೆಯಾಗಿದ್ದು, ಅದು ಸಂಪೂರ್ಣ ಸಹಜವಾಗಿದೆ. ನೀವು ಅದನ್ನು ಬದಲಾಯಿಸಿಕೊಳ್ಳುವುದು ಸಾಧ್ಯವಿದೆ ಎಂದು ಸಲಹೆ ನೀಡುವುದು ಬೇಜವಾಬ್ದಾರಿಯುತವಾದ ಹೇಳಿಕೆಯಾಗಿದೆ ‘ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೋರ್ವ ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ಸೋನಮ್ ಹೇಳಿಕೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com