ಮಾಜಿ ವಾಲಿಬಾಲ್ ಆಟಗಾರ ಹಾಗೂ ಕೋಚ್ ಅಚ್ಯುತ ಕುರೂಪ್ ನಿಧನ

ಮಾಜಿ ವಾಲಿಬಾಲ್ ಆಟಗಾರ ಹಾಗೂ ರಾಷ್ಟ್ರೀಯ ವಾಲಿಬಾಲ್ ತಂಡದ ಕೋಚ್ ಅಚ್ಯುತ ಕುರೂಪ್ ಅವರು ಮಂಗಳವಾರಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅಚ್ಯುತ ಕುರೂಪ್ ಅವರು ಮಡದಿ ಕುಸುಮ್, ಪತ್ರ ಆನಂದ ಕುರೂಪ್ ಹಾಗೂ ಪುತ್ರಿ ಅನುರಾಧಾ ಅವರನ್ನು ಅಗಲಿದ್ದಾರೆ. ಮಕ್ಕಳೂ ಸಹ ವಾಲಿಬಾಲ್ ಆಟಗಾರರಾಗಿದ್ದಾರೆ. ಸೋದರ ಗೋಪಿ ಅವರೂ ಕೂಡ ವಾಲಿಬಾಲ್ ಆಟಗಾರರಾಗಿದ್ದರು.

ಆಟಗಾರರಾಗಿ ನಿವೃತ್ತಿ ಹೊಂದಿದ ನಂತರ ಅಚ್ಯುತ ಕುರೂಪ್ ಅವರು ಕೋಚ್ ಆಗಿ ನೇಮಕಗೊಂಡಿದ್ದರು. ಅಚ್ಯುತ ಕುರೂಪ್ ಅವರು 1986 ರಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಕೋಚ್ ಆಗಿದ್ದರು. ಅಚ್ಯುತ ಕುರೂಪ್ ಅವರ ತರಬೇತಿಯಲ್ಲಿ ಭಾರತ ತಂಡ 1989 ರಲ್ಲಿ ಅಂತರಾಷ್ಟ್ರೀಯ ಫ್ರೆಂಡ್ಷಿಪ್ ವಾಲಿಬಾಲ್ ಚಾಂಪಿಯನ್ಷಿಪ್ ನಲ್ಲಿ ಬೆಳ್ಳಿ ಪದಕ ಜಯಿಸಿತ್ತು.

Sports Authority of India (SAI) ನಲ್ಲಿ ತರಬೇತುದಾರರಾಗಿಯೂ ಅಚ್ಯುತ ಕುರೂಪ್ ಅವರು ಕೆಲಸ ನಿರ್ವಹಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com