ಉತ್ತರ ಕರ್ನಾಟಕಕ್ಕೆ ಸಿದ್ದರಾಮಯ್ಯ ಏನು ಕೊಡುಗೆ ನೀಡಿದ್ದಾರೆ..? : ವಾಟಾಳ್ ನಾಗರಾಜ್

ಹುಬ್ಬಳ್ಳಿ : ಕನ್ನಡಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದಾರೆ. ‘ ಶಾಸಕರು ಹಾಗೂ ಸಂಸದರು ಮಹದಾಯಿ, ಕಳಸಾ ಬಂಡೂರಿ ಹೋರಾಟವನ್ನು ಕೈಬಿಟ್ಟಿದ್ದಾರೆ. ಮಹದಾಯಿ, ಕಳಸಾ ಬಂಡೂರಿ ಹೋರಾಟವನ್ನು ನಾವು ಮುಂದುವರಿಸುತ್ತೇವೆ’

‘ ರಾಜ್ಯದ ಸಂಸದರು ತಮ್ಮ ಕರ್ತವ್ಯ ನಿರ್ವಹಣೆ ಮಾಡಲು ವಿಫಲರಾಗಿದ್ದಾರೆ. ಲೋಕಸಭೆಯಲ್ಲಿ ಕಳಸಾ ಬಂಡೂರಿ ವಿಷಯವಾಗಿ ಚರ್ಚೆ ಮಾಡಿಲ್ಲ. ಒಂದು ಸಾರಿ ಸಭಾ ತ್ಯಾಗ ಮಾಡಿಲ್ಲ, ಹೋರಾಟ ಮಾಡಿಲ್ಲ ‘ ಎಂದು ವಾಟಾಳ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

‘ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀರಾವರಿ ಯೋಜನೆಯಲ್ಲಿ ಮಧ್ಯೆ ಪ್ರವೇಶಕ್ಕೆ ಒತ್ತಡ ತಂದಿಲ್ಲಾ. ಯೋಜನೆ ಜನರಿಗಾಗಿ, ಡಿಸೆಂಬರ್ 9 ರಂದು ಗೋವಾ ಮುತ್ತಿಗೆ ಹಾಕುತ್ತೇವೆ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಹೆಸರಿಗೆ ಮಾತ್ರ. ಈ ಸರ್ಕಾರದ ಕೊನೆಯ ಅಧಿವೇಶನ. ಯಾವುದೇ ಅಜೆಂಡಾ ಇಲ್ಲದ ಅಧಿವೇಶನವಾಗಿದೆ. ಸಿಎಂ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಹೇಳಲಿ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com