ವೈದ್ಯರ ಸಮಸ್ಯೆ ಗೊತ್ತಿಲ್ಲದ್ದರಿಂದ ರಾಕ್ಷಸ ರಮೇಶ್ ಕುಮಾರ್ ಗೆ ಮಕ್ಕಳಿಲ್ಲ – ಕೆ.ಎಸ್ ಈಶ್ವರಪ್ಪ

ಬೆಳಗಾವಿ : ಸಿಎಂ ಮತ್ತು ಸಚಿವರ ವಿರುದ್ದ ವಾಗ್ದಾಳಿ ನಡೆಸಲು ಹೋಗಿ ನಾಲಿಗೆ ಹರಿಬಿಡುತ್ತಿದ್ದ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಇದೀಗ ಮತ್ತೆ ವಿವಾದದ ಹೇಳಿಕೆ ನೀಡಿದ್ದಾರೆ.

ರಾಕ್ಷಸ ರಮೇಶ್ ಕುಮಾರ್ ಗೆ ವೈದ್ಯರ ಸಮಸ್ಯೆ ಗೊತ್ತಾಗ್ತಿಲ್ಲ ಹೀಗಾಗಿ ಅವರಿಗೆ ಮಕ್ಕಳಿಲ್ಲ ಎಂದು ಹೇಳುವ ಮೂಲಕ ಕೆ.ಎಸ್ ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ.

ಬೆಳಗಾವಿಯ ಸುವರ್ಣಸೌಧಧ ಬಳಿಯಿರುವ ಖಾಸಗಿ ವೈದ್ಯರ ಪ್ರತಿಭಟನೆ ವೇದಿಕೆಯಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ರಾಕ್ಷಸ ರಮೇಶ್ ಕುಮಾರ್ ಗೆ ಮಕ್ಕಳಿಲ್ಲ. ಸಿಎಂ ಸಿದ್ದರಾಮಯ್ಯಗೆ ಹೆಣ್ಣುಮಕ್ಕಳಿಲ್ಲ. ಹೀಗಿರುವಾಗ ವೈದ್ಯರ ಸಮಸ್ಯೆಗಳು ಹೇಗೆ ಅರ್ಥವಾಗುತ್ತದೆ ಎಂದರು. ಸಿಎಂ ಸಿದ್ದರಾಮಯ್ಯಗೆ ಯಾವ ಕಾಯ್ದೆ ಜಾರಿ ತರಬೇಕೆಂಬ ಜ್ಞಾನವಿಲ್ಲ ಎಂದು ಸಿಎಂ ವಿರುದ್ದ ಈಶ್ವರಪ್ಪ ಕಿಡಿಕಾರಿದರು.

Leave a Reply

Your email address will not be published.

Social Media Auto Publish Powered By : XYZScripts.com