ಆತ್ಮಹತ್ಯೆಗೆ ಮುಂದಾಗಿದ್ದರಂತೆ ಕುಲದೀಪ್ ಯಾದವ್..! : ಬೌಲರ್ ಹೇಳಿದ ಕಾರಣವೇನು..?

ಟೀಮ್ ಇಂಡಿಯಾದ ಎಡಗೈ ಚೈನಾಮನ್ ಬೌಲರ್ ಕುಲದೀಪ್ ಯಾದವ್, ಆಸ್ಟ್ರೇಲಿಯಾ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಕುಲದೀಪ್ ಯಾದವ್, ಆಸ್ಟ್ರೇಲಿಯಾದ ಬ್ಯಾಟ್ಸಮನ್ ಗಳಾದ ಮ್ಯಾಥ್ಯೂ ವೇಡ್, ಆ್ಯಷ್ಟನ್ ಆ್ಯಗರ್ ಹಾಗೂ ಪ್ಯಾಟ್ರಿಕ್ ಕಮ್ಮಿನ್ಸ್ ಅವರ ವಿಕೆಟ್ ಉರುಳಿಸಿದ್ದರು. ಈ ಮೂಲಕ ಕುಲದೀಪ್ ಯಾದವ್, ಏಕದಿನ ಪಂದ್ಯಗಳಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೂರನೇ ಭಾರತೀಯ ಕ್ರಿಕೆಟರ್ ಎನಿಸಿಕೊಂಡಿದ್ದರು.

Image result for kuldeep yadav upset

ಆದರೆ ಟೀಮ್ ಇಂಡಿಯಾದ ಎಡಗೈ ಸ್ಪಿನ್ ಬೌಲರ್ ಕುಲದೀಪ್ ಯಾದವ್ 9 ವರ್ಷಗಳ ಹಿಂದೆ ಒಮ್ಮೆ ಆತ್ಮಹತ್ಯೆಗೆ ಮುಂದಾಗಿದ್ದರಂತೆ. 13 ವರ್ಷದವರಿದ್ದಾಗ ಉತ್ತರ ಪ್ರದೇಶದ 15 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಅದಕ್ಕೆ ತುಂಬ ಮನನೊಂದಿದ್ದ ಕುಲದೀಪ್ ಯಾದವ್ ಆತ್ಮಹತ್ಯೆಗೆ ಯತ್ನಿಸಿದ್ದರು.

ಈ ಘಟನೆಯ ಬಗ್ಗೆ ಮಾತನಾಡಿರುವ ಕುಲದೀಪ್ ‘ ನಾನು ಆಯ್ಕೆಯಾಗಲು ತುಂಬ ಪರಿಶ್ರಮ ಪಟ್ಟಿದ್ದೆ. ಆದರೆ ನನ್ನನ್ನು ಉತ್ತರ ಪ್ರದೇಶ ತಂಡದಲ್ಲಿ ಆಯ್ಕೆ ಮಾಡದಿದ್ದಾಗ ಹತಾಶೆಯಿಂದ ಆತ್ಮಹತ್ಯೆಗೆ ಮುಂದಾಗಿದ್ದೆ. ಕೆಲವೊಮ್ಮೆ ನಿರಾಶಾದಾಯಕ ಕ್ಷಣಗಳಲ್ಲಿ ಎಲ್ಲರಿಗೂ ಇಂತಹ ಯೋಚನೆಗಳು ಬರುತ್ತವೆ ‘ ಎಂದು ಹೇಳಿದ್ದಾರೆ. ಈಗ ಟೀಮ್ ಇಂಡಿಯಾದ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿರುವ ಕುಲದೀಪ್ ಐಪಿಎಲ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಆಡುತ್ತಾರೆ.

Leave a Reply

Your email address will not be published.