ಕೃಷ್ಣಾ ನದಿಯಲ್ಲಿ ದೋಣಿ ದುರಂತ : ಮಹಾ ಆರತಿ ನೋಡಲು ತೆರಳುತ್ತಿದ್ದ 16 ಜನರ ದುರ್ಮರಣ

ಆಂದ್ರ ಪ್ರದೇಶದ ವಿಜಯವಾಡ ಜಿಲ್ಲೆಯ ಕೃಷ್ಣಾ ನದಿಯಲ್ಲಿ 38 ಜನರು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಗುಚಿದ ಪರಿಣಾಮವಾಗಿ 16 ಜನ ನೀರುಪಾಲಾಗಿ ಸಾವನ್ನಪ್ಪಿದ್ದಾರೆ. 15 ಜನರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದು, 11 ಜನ ಕಣ್ಮರೆಯಾಗಿದ್ದಾರೆ.

Related image

ಕಾರ್ತಿಕ ಮಾಸದ ಕೊನೆಯ ಭಾನುವಾರದ ಪ್ರಯುಕ್ತ ಪವಿತ್ರ ಸಂಗಮಂ ಘಾಟ್ ಬಳಿ ಮಹಾ ಆರತಿ ವೀಕ್ಷಿಸಲು ದೋಣಿಯ ಮೂಲಕ ತೆರಳುತ್ತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದ ಕಾರಣ ಭಾರ ತಡೆಯಲಾಗದೆ ದೋಣಿ ಮುಗುಚಿ ಬಿದ್ದು ಈ ದುರಂತ ಸಂಭವಿಸಿದೆ.

Image result for krishna drown 16 dead

 

ಮುಳುಗಿದ ದೋಣಿ ಪ್ರಯಾಣಿಕರನ್ನು ಸಾಗಿಸುವ ಪರವಾನಗಿಯನ್ನು ಕೂಡ ಹೊಂದಿರಲಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ. ದೋಣಿಯಲ್ಲಿ ಲೈಫ್ ಜಾಕೆಟ್ ಗಳು ಇರಲಿಲ್ಲ ಎಂದು ದುರ್ಘಟನೆಯಲ್ಲಿ ಪ್ರಾಣ ಉಳಿಸಿಕೊಂಡು ಪಾರಾಗಿ ಬಂದವರೊಬ್ಬರು ಹೇಳಿದ್ದಾರೆ. ‘ ಈ ಯಾನಕ್ಕೆ ಲೈಫ್ ಜ್ಯಾಕೆಟ್ ಅಗತ್ಯವಿರಲಿಲ್ಲ ‘ ಎಂದು ಪಾರಾಗಿ ಬಂದ ದೋಣಿಯ ಸಿಬ್ಬಂದಿ ಹೇಳಿದ್ದಾರೆ.

Image result for krishna drown 16 dead

 

30 ಸದಸ್ಯರನ್ನೊಳಗೊಂಡ NDRF (National disaster rescue force) ತಂಡದವರು, 45 ಸದಸ್ಯರನ್ನೊಳಗೊಂಡ SDRF (State disaster rescue force) ತಂಡದವರು ರಕ್ಷಣಾಕಾರ್ಯದಲ್ಲಿ ತೊಡಗಿದ್ದಾರೆ. ಉಪಮುಖ್ಯಮಂತ್ರಿ ಎನ್. ಚಿನರಾಜಪ್ಪ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲಿಸಿದ್ದು, ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com