CM ಸಿದ್ದರಾಮಯ್ಯ ಉಗ್ರ ಸಂಘಟನೆಗಳೊಂದಿಗೆ ಸ್ನೇಹ ಬೆಳೆಸ್ತಿದಾರೆ : BSY

ಉಡುಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ‘ ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆಯಾಗಿದೆ. ಸಿಪಿಎಂ ಬೆಂಬಲದಿಂದ ಈ ಕೊಲೆಯಾಗಿದೆ. ಕೇರಳದಲ್ಲಿ ಬಿಜೆಪಿ ನೇತೃತ್ವದಲ್ಲಿ ಹಲವು ಹೋರಾಟ ನಡೆದಿದೆ. ಕೊಲೆ ಆರೋಪಿಗಳನ್ನು ಬಂಧಿಸುವ ವಿಶ್ವಾಸ ನಮಗಿಲ್ಲ. ಈ ಹತ್ಯೆಯನ್ನು ಖಂಡಿಸುತ್ತೇನೆ. ಮಣಪ್ಪುರಂ ಕಣ್ಣೂರು  ದಾಟಿ ಕ್ರೌರ್ಯ ಕರಾವಳಿಗೆ ಬರಲು ಬಿಡಲ್ಲ ‘

‘ ರಾಜ್ಯದಲ್ಲೂ ಹಿಂದೂ ಯುವಕರ ಕೊಲೆಯಾಗುತ್ತಿದ್ದಾರೆ. ಸಿಎಂ ಉಗ್ರ ಸಂಘಟನೆಗಳ ಜೊತೆ ಸ್ನೇಹ ಬೆಳೆಸ್ತಿದ್ದಾರೆ. ೧೦ ಸಾವಿರ ವೈದ್ಯರು ಹೋರಾಟ ಮಾಡುತ್ತಿದ್ದಾರೆ. ವಿಕ್ರಂಜಿತ್ ಸೇನ್ ಕಮಿಟಿ ವರದಿ ಜಾರಿಗೆ ತರಬೇಕು. ವೈದ್ಯರ ಮೇಲೆ ಸರ್ಕಾರದ ಕಿರುಕುಳ ಖಂಡಿಸ್ತೇನೆ. ಸರ್ಕಾರ ಕರಾಳಮಸೂದೆ ಕೈಬಿಡಬೇಕು. ಕರಾವಳಿಯ ಯುವಕರು ಐಸೀಸ್ ಸೇರ್ಪಡೆಯಾಗುವುದನ್ನು ತಡೆಯಲು ಎನ್ ಐ ಎ ಕಚೇರಿ ತೆರೆಯಬೇಕು ‘

‘ ರಾಜ್ಯದ ಆರ್ಥಿಕ ಪರಿಸ್ಥಿತಿಯ ಶ್ವೇತಪತ್ರ ಹೊರಡಿಸಿ, ಎಲ್ಲೆಲ್ಲಿ ಸಾಲ ಪಡೆದಿದ್ದೀರಿ ಹೇಳಿ. ಕೇಂದ್ರ ಅನುದಾನ ಕೊಟ್ಟದ್ದು ಎಲ್ಲೋಯ್ತು..? ಅಧಿವೇಶನದಲ್ಲಿ ಶ್ವೇತಪತ್ರಕ್ಕೆ ಒತ್ತಾಯಿಸುತ್ತೇವೆ. ಜನರಿಗೆ ರಾಜ್ಯ ಸರ್ಕಾರ ಮಾಡಿದ ಸಾಲದ ಲೆಕ್ಕ ಕೊಡಿ. ಸಿಎಂ ಖಜಾನೆ ಖಾಲಿ ಮಾಡಿ ಸರ್ಕಾರವನ್ನು ದಿವಾಳಿ ಮಾಡಲು ಹೊರಟಿದ್ದಾರೆ. ಹಾಲಾಡಿ ಬಿಜೆಪಿ ಸೇರುವುದು ಖಚಿತವಾಗಿದೆ ‘

‘ ಹಾಲಾಡಿ ಶ್ರೀನಿವಾಸ ಶೆಟ್ಟಿ ಜನಪ್ರಿಯ ನಾಯಕ. ವಿರೋಧವಿದ್ದವರು ಮೌನವಾಗಿ ಇರಿ. ಪಕ್ಷವಿರೋಧಿ ಯಾಗಿ ನಡೆದುಕೊಂಡರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಹಾಲಾಡಿ ಅಧಿಕೃತ ಸೇರ್ಪಡೆ ಮಾತ್ರ ಬಾಕಿ ಇದೆ. ರಾಹುಲ್ ಸೋನಿಯ, ಜಾರ್ಜ್ ಬೇಲ್ ನಲ್ಲಿ ಓಡಾಡ್ತಾರೆ ‘

‘ ಸಿಎಂ ಮೂರು ತಿಂಗಳು ನನ್ನ ವಿರುದ್ಧ ಹೇಳಿಕೊಂಡು ಓಡಾಡಲಿ, ತಾಕತ್ತು ಇದ್ದರೆ 8 ದಿನ ನಿರಂತರ ಪ್ರವಾಸ ಮಾಡಿ ಬನ್ನಿ. ಪಕ್ಷದ ಅಧ್ಯಕ್ಷ ಪರಮೇಶ್ವರ್ ಬೆಂಬಲವೂ ನಿನಗಿಲ್ಲ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಜಾರ್ಜ್ ವಿರುದ್ಧ ಸದನದಲ್ಲೇ ಹೋರಾಟ ಮಾಡುತ್ತೇವೆ. ಕುಮಾರಸ್ವಾಮಿಯವರ ಉಪದೇಶ ನಮಗೆ ಬೇಡ, ನೀವು ನಿಮ್ಮ ಕೆಲಸ ಮಾಡಿ ‘ ಎಂದು ಉಡುಪಿಯಲ್ಲಿ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com