ಅಲಯನ್ಸ್ ವಿವಿಯಿಂದ ಸರ್ಕಾರಿ ಜಾಗ ಒತ್ತುವರಿ: ಮರಳಿ ವಶಕ್ಕೆ ಪಡೆದ ಜಿಲ್ಲಾಡಳಿತ…

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಿಕ್ಕಹಾಗಡೆ ಗ್ರಾಮದ ಬಳಿಯ ಅಲಯನ್ಸ್ ವಿವಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನ ಜಿಲ್ಲಾಡಳಿತ ತೆರವುಗೊಳಿಸಿದೆ.


ಅಲಯನ್ಸ್ ವಿವಿ ಚಿಕ್ಕಹಾಗಡೆ. ಕಾವಳಹೊಸಳ್ಳಿ ಗ್ರಾಮಕ್ಕೆ ಸೇರಿದ 5 ಎಕರೆ ಹತ್ತು ಗುಂಟೆ ಸರ್ಕಾರಿ ಜಾಗವನ್ನ ಒತ್ತುವರಿ ಮಾಡಿಕೊಂಡಿತ್ತು. ಒತ್ತುವರಿ ಜಾಗದಲ್ಲಿ ವಿವಿ ಆಟದ ಮೈದಾನ ನಿರ್ಮಾಣ ಮಾಡಿತ್ತು. ಜಾಗ ಒತ್ತುವರಿಯಾಗಿದ್ದು ದೃಢಪಟ್ಟಿದ್ದು ಇಂದು ಆಟದ ಮೈದಾನ ಕ್ಲೋಸ್ ಮಾಡಿ ಜಿಲ್ಲಾಡಳಿತ ಜಾಗವನ್ನ ವಶಕ್ಕೆ ಪಡೆದಿದೆ.

ಬೆಂಗಳೂರು ದಕ್ಷಿಣ ಎ ಸಿ ಹರೀಶ್ ನಾಯಕ್ ಹಾಗು ಆನೇಕಲ್ ತಹಶೀಲ್ದಾರ್ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸಿದ್ದು, ಆಟದ ಮೈದಾನ ಬಳಸದಂತೆ ಅಲಯನ್ಸ್ ಆಡಳಿತ ಮಂಡಳಿಗೆ ಸೂಚನೆ ನೀಡಿದೆ. ಇನ್ನು ದಾಯಾದಿ ಕಲಹದ ಬೆನ್ನಲ್ಲೇ ಮತ್ತೆ ಅಲಯನ್ಸ್ ವಿವಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com