ಮೋದಿಯವರನ್ನು ಕರೆಸಿ ಮಂಡ್ಯದಲ್ಲಿ ಕಮಲ ಅರಳಿಸೋದು ನಮ್ಮ ಗುರಿ : ಯೋಗೇಶ್ವರ್

‘ ಮಂಡ್ಯಕ್ಕೆ ಮೋದಿ ಕರೆಸಲು ತೀರ್ಮಾನಿಸಿದ್ದೇವೆ ಎಂದು ಮಂಡ್ಯದಲ್ಲಿ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ. ರಾಜ್ಯ, ದೇಶದಲ್ಲೆಲ್ಲಾ ಬಿಜೆಪಿ ಪರ ಒಲವಿದೆ. ಮಂಡ್ಯದಲ್ಲಿ ಮಾತ್ರ ಬಿಜೆಪಿ ವರ್ಚಸ್ಸಿಲ್ಲ. ಹೀಗಾಗಿ ಮೋದಿ ಕರೆಸಲು ತೀರ್ಮಾನಿಸಿದ್ದೇವೆ. ಈ ಬಗ್ಗೆ ರಾಜ್ಯ, ರಾಷ್ಟ್ರ ನಾಯಕರೊಂದಿಗೆ ಚರ್ಚಿಸಿದ್ದೇನೆ ‘ ಎಂದರು.

‘ ಮಂಡ್ಯಕ್ಕೂ ಪ್ರಧಾನಿ ನರೇಂದ್ರ ಮೋದಿ ಕರೆಸಲು ಒಪ್ಪಿದ್ದಾರೆ.  ಜನವರಿ ವೇಳೆಗೆ ಮೋದಿಯವರನ್ನು ಕರೆಸಿ, ಸಮಾವೇಶ ನಡೆಸುತ್ತೇವೆ. ಮೋದಿ ಆಗಮನದ ಮೂಲಕ ಮಂಡ್ಯದಲ್ಲೂ ಬಿಜೆಪಿ ಅರಳಿಸೋದು ನಮ್ಮ ಗುರಿಯಾಗಿದೆ ‘ ಎಂದು ಯೋಗೇಶ್ವರ್ ಹೇಳಿದ್ದಾರೆ. ಮಂಡ್ಯ ಜಿಲ್ಲೆಯಿಂದ ಯೋಗೇಶ್ವರ್ ಸ್ಪರ್ಧೆ ವಿಚಾರವಾಗಿ ಮಾತನಾಡಿ ‘ ವರಿಷ್ಟರು ಹೇಳಿದ ಕಡೆ ಸ್ಪರ್ಧೆ ಮಾಡ್ತೀನಿ. ಬಿಜೆಪಿಗೆ ಮತ್ತಷ್ಟು ನಾಯಕರು ಬರಲಿದ್ದಾರೆ ‘ ಎಂದು ಹೇಳಿದ್ದಾರೆ.

ಮಂಡ್ಯ ಬಿಜೆಪಿ ಮುಖಂಡರ ಜೊತೆ ಯೋಗೇಶ್ವರ್ ಸಭೆ. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಬಿಜೆಪಿ ಮುಖಂಡರು, ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಯಿತು. ಯೋಗೇಶ್ವರ್ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com