ರಣಜಿ ಟ್ರೋಫಿ : ದೆಹಲಿ – ಕರ್ನಾಟಕ ಪಂದ್ಯ ನೀರಸ ಡ್ರಾ : ಸ್ಟುವರ್ಟ್ ಬಿನ್ನಿ ಪಂದ್ಯಶ್ರೇಷ್ಟ

ಹಾಸನದ ಆಲೂರಿನಲ್ಲಿ ಕರ್ನಾಟಕ ಹಾಗೂ ದೆಹಲಿ ತಂಡಗಳ ನಡುವೆ ನಡೆಯುತ್ತಿದ್ದ ರಣಜಿ ಟ್ರೋಫಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ದುಕೊಂಡು 649 ರನ್ ಬೃಹತ್ ಮೊತ್ತ ಸೇರಿಸಿ ಆಲೌಟ್ ಆಗಿತ್ತು. ಕರ್ನಾಟಕದ ಪರವಾಗಿ ಮಯಂಕ್ ಅಗರವಾಲ್ 176, ಸ್ಟುವರ್ಟ್ ಬಿನ್ನಿ 118 ಹಾಗೂ ಶ್ರೇಯಸ್ ಗೋಪಾಲ್ 92 ರನ್ ಬಾರಿಸಿದ್ದರು.

ದೆಹಲಿ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 301 ರನ್ ಗಳಿಸಿ ಆಲೌಟ್ ಆಯಿತು. ಆರಂಭಿಕ ಬ್ಯಾಟ್ಸಮನ್ ಗೌತಮ್ ಗಂಭೀರ್ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಿಡಿಸಿ 144 ರನ್ ಗಳಿಸಿದ್ದರು. ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್ 5, ಸ್ಟುವರ್ಟ್ ಬಿನ್ನಿ 2 ವಿಕೆಟ್ ಪಡೆದರು.

348 ರನ್ ಮುನ್ನಡೆ ಪಡೆದ ಕರ್ನಾಟಕ ಫಾಲೋವ್ ಆನ್ ನೀಡದೆ ಎರಡನೇ ಇನ್ನಿಂಗ್ಸ್ ಆರಂಭಿಸಿತು. ನಾಲ್ಕನೇ ಹಾಗೂ ಕೊನೆಯ ದಿನದಾಟದ ಅಂತ್ಯಕ್ಕೆ ಕರ್ನಾಟಕ 3 ವಿಕೆಟ್ ಕಳೆದುಕೊಂಡು 235 ರನ್ ಗಳಿಸಿತ್ತು. ಆರಂಭಿಕ ಬ್ಯಾಟ್ಸಮನ್ ಕೆ ಎಲ್ ರಾಹುಲ್ 92 ರನ್ ಗಳಿಸಿ ರನೌಟ್ ಆದರು. ನಿಗದಿತ ನಾಲ್ಕೂ ದಿನದ ಆಟ ಮುಗಿದರೂ ಯಾವುದೇ ಫಲಿತಾಂಶ ಹೊರಬರದೇ ಡ್ರಾನಲ್ಲಿ ಅಂತ್ಯಗೊಂಡಿತು.

23 ಪಾಯಿಂಟ್ಸ್ ಗಳಿಸಿರುವ ಕರ್ನಾಟಕ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ. 17 ಪಾಯಿಂಟ್ ಗಳೊಂದಿಗೆ ದೆಹಲಿ ತಂಡ ಎರಡನೇ ಸ್ಥಾನದಲ್ಲಿದೆ.

Leave a Reply

Your email address will not be published.