ಕೇರಳದ ತ್ರಿಶೂರಿನಲ್ಲಿ ಮಾರಕಾಸ್ತ್ರಗಳಿಂದ ಇರಿದು RSS ಕಾರ್ಯಕರ್ತನ ಹತ್ಯೆ

ಕೇರಳದ ತ್ರಿಶೂರಿನಲ್ಲಿ 23 ವರ್ಷದ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದ ಪಿ. ಆನಂದ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಇರಿದು ಹತ್ಯೆಗೈಯಲಾಗಿದೆ. ಮೋಟಾರ್ ಸೈಕಲ್ ಮೇಲೆ ತೆರಳುತ್ತಿದ್ದ ಪಿ.ಆನಂದ್ ಬೈಕ್ ಗೆ ಆರೋಪಿಗಳು ಕಾರಿನಿಂದ ಗುದ್ದಿದ್ದಾರೆ. ನಂತರ ಕೆಳಗಿಳಿದು ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಆನಂದ್ ಕೊನೆಯುಸಿರೆಳೆದಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿದ್ದ ಆನಂದ್, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕಾಸಿಮ್ ಎಂಬಾತನ ಕೊಲೆಯ ಆರೋಪವನ್ನು ಎದುರಿಸುತ್ತಿದ್ದ. ಆದರೆ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ. ಆನಂದ್ ಕೊಲೆಗೈದು ಕೂಡಲೇ ಪರಾರಿಯಾಗಿರುವ ಅಪರಾಧಿಗಳ ಪತ್ತೆಗೆ ಕೇರಳ ಪೋಲೀಸರು ತನಿಖೆ ನಡೆಸಿದ್ದಾರೆ.

‘ ನಾವು ಈಗಲೇ ಏನನ್ನೂ ಹೇಳಲು ಸಾದ್ಯವಿಲ್ಲ. ಈ ಕೊಲೆ ರಾಜಕೀಯ ಪ್ರೇರಿತವೋ ಅಲ್ಲವೋ ಎಂಬುದು ತನಿಖೆಯ ನಂತರ ತಿಳಿದು ಬರಲಿದೆ. ಕೆಲವು ಬಲವಾದ ಸಾಕ್ಷ್ಯಾಧಾರಗಳು ದೊರಕಿದ್ದು, ಕೊಲೆಗಾರರ ಪತ್ತೆಗೆ ತನಿಖೆ ಜಾರಿಯಲ್ಲಿದೆ ‘ ಎಂದು ತ್ರಿಶುರಿನ ಹಿರಿಯ ಪೋಲೀಸ್ ಅಧಿಕಾರಿ ಮಾಧ್ಯಮಗಲಿಗೆ ತಿಳಿಸಿದ್ದಾರೆ.

Leave a Reply

Your email address will not be published.