ಜೆಡಿಎಸ್ 113 ಸ್ಥಾನ ಗೆದ್ದು ಸಂಪೂರ್ಣ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ : HDK

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ‘ ನವೆಂಬರ್ ೧೬ಕ್ಕೆ ಹುಬ್ಬಳ್ಳಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಅವತ್ತೇ ಜೆಡಿಎಸ್ ಮೊದಲ ಹಂತದಲ್ಲಿ ೧೫೦ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವೆ. ಪಕ್ಷಕ್ಕೆ ಯಾರೇ ಬಂದ್ರೂ ಸ್ವಾಗತ. ಯಾರು ಬರ್ತಾರೋ ಗೊತ್ತಿಲ್ಲ. ಬೇರೆ ಪಕ್ಷದ ಯಾವುದೇ ನಾಯಕರೂ ನಮ್ಮ ಜತೆಗೆ ಸಂಪರ್ಕದಲ್ಲಿ ಇಲ್ಲ. ಮುಂದಿನ ಬಾರಿ ಯಾರೊಂದಿಗೂ ಹೊಂದಾಣಿಕೆ ಇಲ್ಲ. ಜೆಡಿಎಸ್ ಸಂಪೂರ್ಣ ಬಲದ ಮೇಲೆ ಅಧಿಕಾರಕ್ಕೆ ಬರುತ್ತೆ. ೧೧೩ ಸ್ಥಾನವನ್ನು ಈ ಸಾರಿ ಗೆದ್ದೇ ಗೆಲ್ತೇವೆ. ಈ ಗುರಿಯಲ್ಲಿ ಯಾವುದೇ ರೀತಿ ಸೋಲಾಗೋದಿಲ್ಲ.

ಉತ್ತರ ಕರ್ನಾಟಕದ ಜನತೆಗೆ ನಾನು ಕ್ಷಮೆ ಕೋರುತ್ತೇನೆ. ಹುಬ್ಬಳ್ಳಿಯಲ್ಲಿ ಮನೆ ಮಾಡಿ ಈ ಭಾಗದ ಜನರ ಜತೆ ಸಂಪರ್ಕ ದಲ್ಲಿರಬೇಕಾದ ಉದ್ದೇಶ ನನ್ನದಿತ್ತು. ಆದ್ರೇ, ಅನಾರೋಗ್ಯದ ಕಾರಣ ಈ ಭಾಗಕ್ಕೆ ಬರಲಾಗಲಿಲ್ಲ. ಕೆಮ್ಮು ಹೃದಯದ ತೊಂದರೆಯಿಂದ ಬಂದಿತ್ತು. ಹೆಚ್೧ಎನ್೧ ಬೇರೆ ಅಟ್ಯಾಕ್ ಆಗಿತ್ತು.

ಇಸ್ರೇಲಿಗೆ ರೈತರ ಬಗೆಗೆ ತಿಳಿಯಲು ಹೋದಾಗಲೇ, ನನಗೆ ಹೃದಯದ ಸಮಸ್ಯೆ ತಿಳಿಯಿತು. ಈ ಕಾರಣಕ್ಕೆ ಉತ್ತರಕರ್ನಾಟಕದ ಜನತೆ ಜತೆಗೆ ನಿರಂತರ ಸಂಪರ್ಕಕ್ಕೆ ಬರಲಾಗಲಿಲ್ಲ. ವೈದ್ಯರು ಇನ್ನೂ ೧ ತಿಂಗಳ ವಿಶ್ರಾಂತಿ ಹೇಳಿದ್ರು. ಆದರೂ ವಿಕಾಸ ಯಾತ್ರೆ ಕೈಗೊಂಡಿರುವೆ. ೧೦ ದಿನ ಹುಬ್ಬಳ್ಳಿಯಿಂದಲೇ ಅಧಿವೇಶನಕ್ಕೆ ತೆರಳುವೆ.

ಬೆಳಗಾವಿಯಲ್ಲಿ ಅಧಿವೇಶ ‌ವೇಳೆ ಸಮಾವೇಶ ನಡೆಸುವೆ. ನವೆಂಬರ್ ೧೪ರಂದು ಜೆಡಿಎಸ್ ಸಮಾವೇಶ ನಡೆಸುತ್ತೇವೆ. ನಂಜುಂಡಪ್ಪ ವರದಿ ಬಗ್ಗೆ ೧೫ ವರ್ಷದಿಂದ ಚರ್ಚೆ ನಡೀತಿದೆ. ಹೈಕ ಅಭಿವೃದ್ಧಿಗೆ‌ ವೇಗ ನೀಡಲು ಅದೇ ಭಾಗದ ಸಚಿವರನ್ನೇ ಮುಖ್ಯಸ್ಥರನ್ನಾಗಿಸಿದಾರೆ. ಈ ಸಮಾವೇಶದಲ್ಲಿ ಸರ್ಕಾರ ಬಳಸಿದ ಅನುದಾನದ ಕುರಿತು ಬಯಲು ಮಾಡುವೆ.

ಈ ಸರ್ಕಾರದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ ಎಷ್ಟು ಕೊಟ್ಟಿದ್ದಾರೆ. ನೀರಾವರಿ ಯೋಜನೆಗಳ ಬಳಕೆಗೆ ಎಷ್ಟು ಹಣ ಇರಿಸಿದ್ದಾರೆ. ಸರ್ಕಾರ ಈ ಬಗ್ಗೆ ಎಲ್ಲ ಹೇಳಬೇಕಾಗುತ್ತೆ. ಮಹದಾಯಿ ವಿವಾದದಲ್ಲಿ ಎಲ್ಲ ಪಕ್ಷಗಳೂ ಪ್ರಶ್ನೆಗಳನ್ನು ಎದುರಿಸಬೇಕಾಗಿದೆ. ಮಾಧ್ಯಮಗಳಲ್ಲಿ ಬರ್ತಿರೋ ಎಲ್ಲ ಚರ್ಚೆಗಳನ್ನೂ ಗಮನಿಸಿರುತ್ತಿರುವೆ.  ವಿದ್ಯುತ್ ಅಭಾವ ನೀಗಿಸೋಕೆ ಕಲ್ಲಿದ್ದಲು ಸ್ಟಾಕ್ ಮಾಡಲು ಎಷ್ಟರಮಟ್ಟಿಗೆ ಸರ್ಕಾರ ಗಮನ ಹರಿಸಿದೆ. ಹಲವಾರು ಯೂನಿಟ್ ಗಳನ್ನ ಕ್ಲೋಸ್ ಮಾಡಲಾಗಿದೆ. ಇದರಲ್ಲಿ ಅಧಿಕಾರಿಗಳದ್ದೂ ತಪ್ಪಿದೆ. ಕೇಂದ್ರ ಕೂಡ ನಮಗೆ ದಾಕ್ಷಿಣ್ಯಕ್ಕೆ ಕೊಡ್ತಿಲ್ಲ.

ಸಿಎಂ ಬಾಯಲ್ಲಿಯೇ ಸಚೀವ  ಡಿಕೆಶಿಗೆ ಐಟಿ ಅಧಿಕಾರಿಗಳಿಂದ ಒತ್ತಡದ ವಿಚಾರ. ಸಿಎಂ ಸಿದ್ದರಾಮಯ್ಯ ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಡಿಕೆಶಿ ತಮ್ಮನ್ನ ತಾವು ರಕ್ಷಿಸಿ ಕೊಳ್ಳೋದರಲ್ಲಿ ಮಗ್ನವಾಗಿರೋದ್ರಿಂದ ಇಂಧನ ಇಲಾಖೆ ನಿಭಾಯಿಸಲಾಗ್ತಿಲ್ಲ ಅನಿಸುತ್ತಿದೆ. ಡಿಕೆಶಿಗೆ ಐಟಿ ಬಿಜೆಪಿ ಸೇರಲು ಒತ್ತಡ ಹಾಕ್ತಿದ್ದಾರೆ ಅನ್ನೋ ಸಿಎಂ ಹೇಳಿಕೆ ಯಾವ ರೀತಿಯಲ್ಲಾದ್ರೂ ಅರ್ಥೈಸಬಹುದು.

ಈ ಎಲ್ಲ ವಿಚಾರಗಳನ್ನು ನಾನು ಸದನದಲ್ಲಿ ಚರ್ಚೆ ನಡೆಸಲಿದ್ದೇನೆ. ಬಿಜೆಪಿ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದು ಕಲಾಪ ನಡೆಯಲು ಬಿಡೋದಿಲ್ಲ ಅಂತ ಹೇಳಿದಾರೆ. ಆದ್ರೇ, ಈಗಾಗಲೇ ಈ ಭಾಗದ ಜನ ಅಧಿವೇಶನ ಕಾಟಾಚಾರ ಎಂಬ ಆಕ್ರೋಶವಿದೆ. ಇದರಿಂದ ಯಾವುದೇ ರೀತಿಯಲ್ಲೂ ಪ್ರಯೋಜನವಾಗ್ತಿಲ್ಲ. ಬಿಜೆಪಿಗೆ ನಾನು ಅದಕ್ಕಾಗಿ ಈಗಲೇ ಮನವಿ ಮಾಡುವೆ. ಕಾಲ ಹರಣ ಮಾಡದೇ ಚರ್ಚೆಗೆ ಅವಕಾಶ ನೀಡಲು ಮನವಿ ಮಾಡುವೆ. ಈ ಬಗ್ಗೆ ನೇರವಾಗಿಯೇ ಬಿಜೆಪಿ ನಾಯಕರ ಜತೆಗೆ ಚರ್ಚೆ ನಡೆಸಿ ಮನವಿ ಮಾಡುವೆ.

ಈ ಭಾಗದ ನೀರಾವರಿ ಯೋಜನೆಗಳ ಬಗ್ಗೆ ಹಾರಿಕೆ ಉತ್ತರ ನೀಡಲಾಗ್ತಿದೆ. ಅದು ಆಗಬಾರದು. ಶೋಭಾ ಕರಂದ್ಲಾಜೆ ಮೇಲಿನ ಆರೋಪಕ್ಕೆ ಸದನ ಸಮಿತಿ ಮಾಡಿದ್ರೂ ಆ ಬಗ್ಗೆ ಚಕಾರ ಎತ್ತಲಿಲ್ಲ. ಈಗ ಮಾಜಿ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ಆರೋಪ ಮಾಡ್ತಾರೆ. ನಾನು ಇಂಧನ ಇಲಾಖೆಯಲ್ಲಿನ ಲೋಪದೋಷ ಎತ್ತಿ ತೋರಿಸಿರುವೆ. ವಿದ್ಯುತ್ ಚ್ಛಕ್ತಿ, ನೀರಾವರಿ ಹಾಗೂ ರೈತರ ಸಮಸ್ಯೆಗಳನ್ನು ಈ ಸಾರಿಯ ಅಧಿವೇಶನದಲ್ಲಿ ಚರ್ಚಿಸುವೆ. ರೈತರ ಸಾಲ ಮನ್ನಾ ಮಾಡಿರೋದಾಗಿ ಸಿಎಂ ಹೇಳ್ತಿದ್ದಾರೆ. ಆದ್ರೇ, ಈಗಲೂ ಸಂಪೂರ್ಣ ಹಣ ನೀಡಿಲ್ಲ.

ಮೆಡಿಕಲ್ ಎಜುಕೇಷನ್‌ ಬಿಲ್ ಬಗ್ಗೆಯೂ ಚರ್ಚೆಯಾಗಬೇಕು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕಮಿಟಿ ರಚಿಸಿದ್ಮೇಲೆ ಅವರು ನೀಡಿದ ವರದಿ ಯಾಕೆ ಕಡೆಗಣಿಸಿದ್ದೀರಿ. ವೆಸ್ಟ್ ಬೆಂಗಾಲ್ ನಲ್ಲಿ ಇದು ವಿಫಲವಾಗಿದೆ. ಪಶ್ಚಿಮ ಬಂಗಾಳದ ರೋಗಿಗಳು ಕರ್ನಾಟಕಕ್ಕೆ ಬರ್ತಿದ್ದಾರೆ. ಸಣ್ಣಪುಟ್ಟ ವೈದ್ಯರ ಮೇಲೆ ಯಾಕೆ ಉದಾ ಪ್ರಹಾರ ಯಾಕೆ? ಆಸ್ಪತ್ರೆ ಕಟ್ಟಿದವರ ಮೇಲೆ ಕ್ರಮ ಓಕೆ. ಆದ್ರೇ, ವೈದ್ಯರ ಮೇಲೆ ಯಾಕೆ ಕ್ರಮ. ಸರ್ಕಾರಿ ಆಸ್ಪತ್ಪೆಗಳಲ್ಲಿ ಮೂಲಸೌಕರ್ಯ ಕೊಟ್ರೇ ಖಾಸಗಿ ಆಸ್ಪತ್ರೆಗಳ ಕಡೆ ಯಾಕೆ ಜನ  ಹೋಗ್ತಾರೆ?

ನನ್ನ ಉದ್ದೇಶ ಬಡ ರೋಗಿಗಳಿಗೆ ಒಳ್ಳೇದಾಗಲಿ ಎಂಬುದಷ್ಟೇ. ಖಾಸಗಿ ಆಸ್ಪತ್ರೆಗಳ ಪ್ರತಿಬಂಧಕ ಕಾಯ್ದೆ ಬಗ್ಗೆ ಚರ್ಚೆ ಆಗಬೇಕು. ಇವತ್ತು ಕಬ್ಬಿನ ಇಳುವರಿ ಕಡಿಮೆಯಾಗಿದೆ. ಈ ಸರ್ಕಾರ ರೈತರ ಪರವಾಗಿ ಇಲ್ವೇ ಇಲ್ಲ. ಎಂಎಸ್ಪಿ ರೇಟ್ ನಿಗದಿ ಮಾಡಿದ್ರೇ ರೈತರು ಏನ್ಮಾಡ್ಬೇಕು. ಕಬ್ಬಿನ ಕಾರ್ಖಾನೆಗಳು ನಷ್ಟದಲ್ಲೇನೂ ‌ನಡೀತಿಲ್ಲ.

ಮಹಾದಾಯಿ ವಿಚಾರವಾಗಿ ಮಾಜಿ ಸಿಎಂ ಬಿಎಸ್ ವೈ ಪರಿವರ್ತನಾ ಯಾತ್ರೆ ಮುಗಿಯುವ ಒಳಗೆ ವಿವಾದ ಇತ್ಯರ್ಥ ಪಡಿಸೋದಾಗಿ ಹೇಳಿದಾರೆ. ಹುಬ್ಬಳ್ಳಿ ಸಮಾವೇಶಕ್ಕೆ ಯುಪಿ ಸಿಎಂ ಕರೆಸುತ್ತಿರೋ ಬಿಜೆಪಿ ನಾಯಕರು ಯಾಕೆ‌ ವಿವಾದ ಪರಿಹಾರ ಮಾಡಬಾರದು. ಮೋದಿ ಈಗಲೂ ವಿವಾದ ಇತ್ಯರ್ಥ ಪಡಿಸೋಕೆ ಅವಕಾಶವಿದೆ. ಮಹದಾಯಿ ವಿವಾದ ಪರಿಹರಿಸಿ ಯೋಗಿ ಆದಿತ್ಯನಾಥ ಸಮಾವೇಶದಲ್ಲಿ ಪಾಲ್ಗೊಳ್ಳಲಿ.

ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡೋಕೆ ಮುಕ್ತ ಅವಕಾಶವಿದೆ. ಈ ಭಾಗದ ಜನರ ಜತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವೆ. ೫೦ ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವೆ. ಈ ಸಾರಿ ಸ್ವತಂತ್ರ ಸರ್ಕಾರ ಮಾಡಿಯೇ ತೀರುತ್ತೇನೆ. ಈ ಸಾರಿ ಚುನಾವಣೆಯಲ್ಲಿ ಕುಟುಂಬದಲ್ಲಿ ಕೆಲ ಕಠಿಣ ನಿರ್ಧಾರ ಕೈಗೊಳ್ಳುವೆ ‘ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com