ಕೊನೆಗೂ ನನಸಾಯ್ತು ಮಾಹಿಯ ಬಹುದಿನದ ಕನಸು..! : ಇದು ಧೋನಿ ಡ್ರೀಮ್..

ಭಾರತ ಕಂಡ ಯಶಸ್ವೀ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ತಮ್ಮ ಬಹುಕಾಲದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ  ದುಬೈನಲ್ಲಿ ತಮ್ಮ ದೇ ಹೆಸರಿನ ‘ಎಮ್ ಎಸ್ ಧೋನಿ ಕ್ರಿಕೆಟ್ ಅಕಾಡೆಮಿ (MSDCA) ‘ ಯನ್ನು  ಉದ್ಘಾಟಿಸಿ ಚಾಲನೆ ನೀಡಿದ್ದಾರೆ. ದುಬೈನ ಪ್ಯಾಸಿಫಿಕ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಆರ್ಕಾ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಇದನ್ನು ಸ್ಥಾಪಿಸಲಾಗಿದೆ.

Related image

ಅಕಾಡೆಮಿ ಉದ್ಘಾಟಿಸಿದ ನಂತರ ಮಾತನಾಡಿದ ಧೋನಿ, ‘ಈ ಸಾಹಸದಲ್ಲಿ ಭಾಗವಾಗಿರುವುದಕ್ಕೆ ಸಂತಸವಾಗುತ್ತಿದೆ. ಇದನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯಲ್ಲೂ ಶ್ರಮಿಸಲಿದ್ದೇನೆ. ಕ್ರಿಕೆಟ್ ಗಾಗಿ ಏನಾದರೂ ಮಾಡಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ಈ ದಿಶೆಯಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ತರಬೇತುದಾರರ ಉತ್ಸಾಹದ ಮೇಲೆ ಈ ಅಕಾಡೆಮಿಯ ಯಶಸ್ಸು ಅವಲಂಬಿಸಿದೆ ‘ ಎಂದಿದ್ದಾರೆ.

ಮುಂಬೈನ ಮಾಜಿ ಬೌಲರ್ ವಿಶಾಲ್ ಮಹಾದಿಕ್ ತರಬೇತಿ ನೀಡಲಿದ್ದಾರೆ. ಅಕಾಡೆಮಿಯು ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು ಟರ್ಫ್ ಪಿಚ್, ಸ್ಪಿನ್, ಸ್ವಿಂಗ್ ಬೌಲಿಂಗ್ ಮಷಿನ್, ಸುರಕ್ಷಿತವಾದ ನೆಟ್ಸ್, ರಾತ್ರಿ ಹೊತ್ತು ಅಭ್ಯಾಸ ಮಾಡಲು ಲೈಟ್ಸ್,  ಅತ್ಯಾಧುನಿಕ ವಿಡಿಯೋ ವಿಶ್ಲೇಷಣೆಯ ಪರಿಕರಗಳನ್ನು ಹೊಂದಿದೆ. ತರಬೇತಿ ಪಡೆಯುವ ಯುವ ಆಟಗಾರರಿಗೆ ಮ್ಯಾಚ್ ಪ್ರಾಕ್ಟಿಸ್ ಆಗಲು, ಆಗಾಗ ಸ್ಪರ್ಧಾತ್ಮಕ ಪಂದ್ಯಗಳನ್ನು ಕೂಡ ಅಕಾಡೆಮಿ ಏರ್ಪಡಿಸಲಿದೆ.

Leave a Reply

Your email address will not be published.