Belagavi session : ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುತ್ತೇವೆ- ಬಿಎಸ್ ಯಡಿಯೂರಪ್ಪ

ಮಂಗಳೂರು: ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಹಲವು ಭ್ರಷ್ಟಚಾರ ಹಗರಣ ನಡೆದಿದೆ. ಇವುಗಳನ್ನ ಮುಂದಿನ ಅಧಿವೇಶನದಲ್ಲಿ ದಾಖಲೆ ಸಮೇತ ಬಿಚ್ಚಿಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಹಲವು ಭ್ರಷ್ಟಾಚಾರಗಳಲ್ಲಿ ತೊಡಗಿದ್ದಾರೆ. ಕೆ.ಸಿ ವೇಣು ಗೋಪಾಲ್ ಲೈಂಗಿಕ ಹಗರಣ ಜಗಜ್ಜಾಹಿರಾಗಿದೆ. ತಕ್ಷಣ ಕೆ.ಸಿ ವೇಣುಗೋಪಾಲ್ ರನ್ನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸ್ಥಾನದಿಂದ ಕೈಬಿಡಬೇಕು.ಅವರು ನಿಜವಾಗಿ ಪ್ರಾಮಾಣಕವಾಗಿದ್ದರೆ ಸಿಬಿಐಗೆ ವಹಿಸಲಿ ಎಂದು ಆಗ್ರಹಿಸಿದರು.

ಬೆಳಗಾವಿ ಸುವರ್ಣಸೌಧ ಸರಿಯಾಗಿ ಉಪಯೋಗವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಬಿಎಸ್ ವೈ, ಕರ್ನಾಟಕಕ್ಕೆ ಐಎಸ್ ಐಎಸ್ ನಂಟಿದೆ, ಜನರಲ್ಲಿ ಭಯವಿದ್ದು, ನಾವು ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಮಂಗಳೂರಿನಲ್ಲಿ ಎನ್ ಐಎ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದರು. ಈ ಮೊದಲು CM ವಿರುದ್ಧ ದಾಖಲೆ ಬಿಡುಗಡೆ ಮಾಡುತ್ತೆವೆ ಎಂದು ಹೇಳಿದ್ದರಲ್ಲ ಅಂತ ಪ್ರಶ್ನೆ ಕೇಳಿದರೆ ಯತ್ತರಿಸದೆ ಹೊರನಡೆದರು…

Leave a Reply

Your email address will not be published.

Social Media Auto Publish Powered By : XYZScripts.com