ಸಿಎಂ ಸಿದ್ದರಾಮಯ್ಯ ರಾವಣ : ಹಿಂದೂ ಸಂಸ್ಕೃತಿಯನ್ನ ನಾಶಕ – ನಳಿನ್ ಕುಮಾರ್ ಕಟೀಲ್…

ಉಡುಪಿ: ಸಿಎಂ ಸಿದ್ದರಾಮಯ್ಯ ರಾವಣನಿಗಿಂತ ದುಷ್ಟ. ಹಿಂದೂ ಸಂಸ್ಕೃತಿಯನ್ನ ನಾಶ ಮಾಡಲು ಹೊರಟಿದ್ದಾರೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ಉಡುಪಿಯಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಸಿಎಂ ಸಿದ್ದರಾಮಯ್ಯ ರಾವಣನಿಗಿಂತ ದುಷ್ಟ. ಹಿಂದೂ ಸಮಾಜವನ್ನ ಒಡೆಯಲು ಮುಂದಾಗಿದ್ದಾರೆ. ರಾಮಭಕ್ತರಾಗಿ ಬಿಎಸ್ ಯಡಿಯೂರಪ್ಪ ಬರಲಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನ ನಾಶ ಮಾಡಲಿದ್ದಾರೆ ಎಂದು ಕಿಡಿ ಕಾರಿದರು.

ಕುಂಭಕರ್ಣ ಸತ್ತನಂತರ ನಿದ್ರಾದೇವಿ ಈಗ ಸಿಎಂ ಸಿದ್ದರಾಮಯ್ಯರನ್ನ ಆವರಿಸಿದ್ದಾಳೆ. ಹೀಗಾಗಿ ಸಿಎಂ ಯಾವಾಗಲೂ ನಿದ್ರೆಯಲ್ಲಿರುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಹರಿಹಾಯ್ದರು.

Leave a Reply

Your email address will not be published.

Social Media Auto Publish Powered By : XYZScripts.com