ಹೆಂಡತಿ ಶೀಲವನ್ನು ಶಂಕಿಸಿದ ಗಂಡ : ಪತಿರಾಯನ ಕೋಪಕ್ಕೆ ಬೀದಿ ಪಾಲಾಯ್ತು ತವರು ಮನೆ..!

ಗದಗ : ನಿದ್ರಾವಸ್ಥೆಯಲ್ಲಿದ್ದ ಕುಟುಂಬದ ಮೇಲೆ ತಡರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಒಬ್ಬನನ್ನು ಕೊಚ್ಚಿ ಕೊಲೆ ಮಾಡಿರೋ ಪೈಶಾಚಿಕ ಘಟನೆ ನಡೆದಿದ್ದು, ಈ ಘಟನೆಯಲ್ಲಿ 5 ಜನರಿಗೆ ಗಂಭೀರ ಗಾಯಗಳಾಗಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದ ಘಟನೆ ಇದಾಗಿದ್ದು ಘಟನೆಯಲ್ಲಿ ಸಣ್ಣಪ್ಪ ಹೊನ್ನಣ್ಣವರ ಸಾವನ್ನಪ್ಪಿದ್ದಾರೆ. ಅಡಿವೆಪ್ಪ, ಚಂದ್ರಕಾತ, ಹನುಮವ್ವ, ರಂಗವ್ವ ಸೇರಿದಂತೆ ಐವರು ತೀವ್ರ ಗಾಯಗೊಂಡಿದ್ದು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿಗಳಾದ ಸುಭಾಷ್ ಮತ್ತು ರೇಣುಕಾ ನಡುವೆ ಹಲವು ವರ್ಷಗಳಿಂದ ಕಲಹ ಏರ್ಪಟ್ಟಿದ್ದು ರೇಣುಕಾ ಶೀಲದ ಮೇಲೆ ಸುಭಾಷ್ ಶಂಕಿಸುತ್ತಿದ್ದ.

ಈ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ರೇಣುಕಾ ತವರು ಮನೆಯಲ್ಲಿಯೇ ಇದ್ದಳು. ನಿನ್ನೆ ಏಕಾಏಕಿ 30ಕ್ಕೂ ಹೆಚ್ಚು ಜನರೊಂದಿಗೆ ಮನೆಗೆ ನುಗ್ಗಿದ ಸುಭಾಷ್ ಮಾರಕಾಸ್ತ್ರಗಳಿಂದ ರೇಣುಕಾಳ ಅಣ್ಣನಾದ ಸಣ್ಣಪ್ಪನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ತಂದೆಯೇ ಕೊಲೆ ಮಾಡಿದ್ದ ಎಂದು ಮಕ್ಕಳು ಹೇಳುತ್ತಿದ್ದು ಉಳಿದವರು ಮುಸುಕುಧಾರಿಗಳಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಂಗಿ ಕುಟುಂಬದ ಕಲಹಕ್ಕೆ ಅಣ್ಣನ ಕುಟುಂಬ ಬೀದಿ ಪಾಲಾದಂತಿದೆ. ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published.