ತುಮಕೂರು : ಮದುವೆ ಮಂಟಪದಿಂದ ಓಡಿಹೋದ ವಧು : ಅರ್ಧಕ್ಕೆ ನಿಂತ ಮದುವೆ..!

ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಮದುವೆ ಮಂಟಪದಿಂದ ವಧು ಓಡಿಹೋಗಿದ್ದಾಳೆ. ಮದುವೆ ಮಂಟಪದಿಂದ ವಧು ಓಡಿ ಹೋದದ್ದರಿಂದ ಮದುವೆ ಅರ್ಧಕ್ಕೆ ನಿಂತಿರುವ ಘಟನೆ ಕುಣಿಗಲ್ ತಾಲ್ಲೂಕಿನ ಯಡಿಯೂರು ದೇವಸ್ಥಾನದಲ್ಲಿ ನಡೆದಿದೆ.

ರಾಮಕೃಷ್ಣ ಹಾಗೂ ರಮ್ಯಾರ ಧಾರೆ ಮುಹೂರ್ತ ರವಿವಾರ ಬೆಳಗ್ಗೆ ೯-೩೦ ಕ್ಕೆ ಇತ್ತು. ಶನಿವಾರ ರಾತ್ರಿ ಆರತಕ್ಷತೆಯೂ ನಡೆದಿತ್ತು. ಆರತಕ್ಷತೆಯಲ್ಲಿ ವಧು ರಮ್ಯಾ ಖುಷಿಯಿಂದಲೇ ಇದ್ದಳು. ಆದರೆ ರಮ್ಯಾ ರಾತ್ರೋ ರಾತ್ರಿ ಕಾಣೆಯಾಗಿದ್ದಾಳೆ.

ಮದುವೆ ಮಂಟಪದಿಂದ ಓಡಿ ಹೋದ ವಧು ರಮ್ಯಾ ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ. ವರನಾದ ರಾಮಕೃಷ್ಣ ಯಡಿಯೂರು ನಿವಾಸಿಯಾಗಿದ್ದಾರೆ. ರಾಮಕೃಷ್ಣ ಆಟೋ ಡ್ರೈವರ್ ಆಗಿದ್ದಾರೆ. ವಧು ಓಡಿ ಹೋಗಿದಕ್ಕೆ ಕಾರಣ ಏನಿರಬಹುದೆಂದು ಇದುವರೆಗೆ ತಿಳಿದು ಬಂದಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com