ಕೊಹ್ಲಿ ಬಗ್ಗೆ ಟ್ವೀಟ್ ಮಾಡಿದ ಮೊಹಮ್ಮದ್ ಆಮಿರ್, ಅಖ್ತರ್ : ಪಾಕ್ ಬೌಲರ್ಗಳು ಹೇಳಿದ್ದೇನು?

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನೆರೆ ರಾಷ್ಟ್ರ ಪಾಕಿಸ್ತಾನದ ಇಬ್ಬರು ವೇಗದ ಬೌಲರ್ ಗಳಿಂದ ಭಾರೀ ಪ್ರಶಂಸೆ ದೊರೆತಿದೆ. ಪಾಕ್ ತಂಡದ ಎಡಗೈ ವೇಗಿ ಮೊಹಮ್ಮದ್ ಆಮಿರ್ ಹಾಗೂ ವಿಶ್ವದ ಅತ್ಯಂತ ವೇಗದ ಬೌಲರ್ ಎಂದು ಖ್ಯಾತಿ ಗಳಿಸಿದ್ದ ಶೋಯೇಬ್ ಅಖ್ತರ್ ಕೊಹ್ಲಿಯನ್ನು ಹೊಗಳಿದ್ದಾರೆ.

ಕೆಲ ದಿನಗಳ ಹಿಂದೆ ‘ ಮೊಹಮ್ಮದ್ ಆಮಿರ್ ತುಂಬ ಪ್ರತಿಭಾವಂತ ಬೌಲರ್. ಆಮಿರ್ ನಾನು ಎದುರಿಸಿದ ಶ್ರೇಷ್ಠ ಬೌಲರುಗಳಲ್ಲಿ ಒಬ್ಬರು ‘ ಎಂದು ಕೊಹ್ಲಿ ಹೇಳಿದ್ದರು. ‘ ಶೋಯೇಬ್ ಅಖ್ತರ್ ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕರ್ ಎಂಡ್ ನಲ್ಲಿರುವುದೇ ಉತ್ತಮ ‘ ಎಂದು ವಿರಾಟ್ ಹೇಳಿದ್ದರು.

ಮೊಹಮ್ಮದ್ ಆಮಿರ್ ‘ ವಿರಾಟ್ ಕೊಹ್ಲಿ ಒಬ್ಬ ಜಂಟಲ್ ಮನ್, ಶ್ರೇಷ್ಟ ಆಟಗಾರ ಹಾಗೂ ಉದಾರ ಹೃದಯವುಳ್ಳ ವ್ಯಕ್ತಿ. ಮೈ ಪ್ರೇಯರ್ಸ್ ಫಾರ್ ಯು ಫ್ರೆಂಡ್. ನಾವಿಬ್ಬರೂ ಮೈದಾನದಲ್ಲಿ ವಿರುದ್ಧವಾಗಿ ಆಡುವುದನ್ನು ಎದುರು ನೋಡುತ್ತಿದ್ದೇನೆ ‘ ಎಂದಿದ್ದಾರೆ.

ಶೋಯೆಬ್ ಅಖ್ತರ್ ‘ ನನಗೆ ಕೊಹ್ಲಿ ಎದುರು ಬೌಲ್ ಮಾಡುವ ಅವಕಾಶ ಬರದಿರುವುದೇ ಒಳ್ಳೆಯದಾಯಿತು. ನಿಸ್ಸಂಶಯವಾಗಿ ಆತ ಒಬ್ಬ ಶ್ರೇಷ್ಟ ಬ್ಯಾಟ್ಸಮನ್, ಒಂದು ವೇಳೆ ಆತನ ಎದುರು ಬೌಲಿಂಗ್ ಮಾಡಿದ್ದರೆ ನಮ್ಮಿಬ್ಬರ ನಡುವೆ ಉತ್ತಮ ಸ್ಪರ್ಧೆ ಏರ್ಪಡಬಹುದಿತ್ತು ‘ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com