Mysore Policeರಿಗೆ ಸಿಹಿ ಸುದ್ದಿ : ಮಕ್ಕಳ ಹುಟ್ಟುಹಬ್ಬಕ್ಕೆ ಸಿಕ್ತು ರಜೆ ಭಾಗ್ಯ…

ಮೈಸೂರು : ಪೊಲೀಸ್ ಸಿಬ್ಬಂದಿಗೆ ಮಕ್ಕಳ ಹುಟ್ಟುಹಬ್ಬಕ್ಕಾಗಿ ಕಡ್ಡಾಯ ರಜೆ ನೀಡಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣೇಶ್ವರರಾವ್ ನೂತನ ಸುತ್ತೋಲೆಯನ್ನು ಹೊರಡಿಸಿದ್ದಾರೆ.


ಪೇದೆಯಿಂದ ಪಿಎಸ್ ಐ ವರೆಗೆ ಎಲ್ಲರಿಗೂ ತಮ್ಮ ಮಕ್ಕಳ ಹುಟ್ಟುಹಬ್ಬಕ್ಕೆ ಕಡ್ಡಾಯವಾಗಿ ರಜೆ ನೀಡಲಾಗುವುದು ಎಂದು ಡಾ.ಎ.ಸುಬ್ರಹ್ಮಣೇಶ್ವರರಾವ್ ತಿಳಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ ಎಲ್ಲಾ ಸಂದರ್ಭಗಳಲ್ಲೂ ಕರ್ತವ್ಯ ನಿರ್ವಹಿಸುತ್ತಾರೆ. ಹೀಗಾಗಿ ಕುಟುಂಬದ ಸಂಭ್ರಮಗಳಿಂದ ಅವರು ವಂಚಿತರಾಗುತ್ತಾರೆ. ಇದರಿಂದ ಸಿಬ್ಬಂದಿ ದೈಹಿಕವಾಗಿ ಮಾನಸಿಕವಾಗಿ ಅವರ ಆತ್ಮಸ್ಥೈರ್ಯ ಕುಗ್ಗುತ್ತದೆ. ಇದರಿಂದ ಪೊಲೀಸರು ಕರ್ತವ್ಯ ನಿರ್ವಹಿಸಲು ಅಡಚಣೆ ಉಂಟಾಗುತ್ತದೆ.

ಈ ಹಿನ್ನೆಲೆ ಪೇದೆಯಿಂದ ಪಿಎಸ್‍ಐವರೆಗೆ ಎಲ್ಲಾ ಸಿಬ್ಬಂದಿಗೆ ಮಕ್ಕಳ ಹುಟ್ಟುಹಬ್ಬಕ್ಕೆ ಕಡ್ಡಾಯ ರಜೆಯನ್ನು ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಠಾಣೆಯಲ್ಲಿ ಯಾವುದೇ ಪ್ರಮುಖ ಕೆಲಸವಿದ್ದರೂ ಪೊಲೀಸ್ ಸಿಬ್ಬಂದಿಗೆ ಅವರ ಮಕ್ಕಳ ಹುಟ್ಟುಹಬ್ಬದಂದು ರಜೆ ನೀಡಬೇಕು. ಪೊಲೀಸ್ ಠಾಣೆ, ಸಿಸಿಬಿ, ಸಿಎಸ್‍ಬಿ, ಸಿಸಿಆರ್‍ಬಿ, ಕಂಟ್ರೋಲ್ ರೂಂ, ವಿಮಾನ ನಿಲ್ದಾಣ, ಬೆರಳಚ್ಚು ಮುದ್ರೆ ಘಟಕದ ಸಿಬ್ಬಂದಿಗಳಿಗೂ ಈ ಸುತ್ತೋಲೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಈ ಸುತ್ತೋಲೆ ಮೈಸೂರು ನಗರ ಪೊಲೀಸರಿಗೆ ಸಿಹಿಸುದ್ದಿ ನೀಡಿದ್ದು, ಪೊಲೀಸ್ ಸಿಬ್ಬಂದಿ ಫುಲ್ ಖುಷ್ ಆಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com