ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ : ನೋದಣಿ ಕಛೇರಿ ಉದ್ಘಾಟಿಸಿದ ಎಚ್ಸಿ. ಮಹದೇವಪ್ಪ

ಮೈಸೂರು: ನವೆಂಬರ್ 24 ರಿಂದ 3 ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ ನೋಂದಣಿ ಕಚೇರಿ ಉದ್ಘಾಟನೆ ಮಾಡಿದರು. ಪಡುವಾರಹಳ್ಳಿಯಲ್ಲಿರುವ ಬಾಬು ಜಗಜೀವನ ರಾಂ ಭವನದಲ್ಲಿ ನೋಂದಣಿ ಕಚೇರಿಯನ್ನು ಸಚಿವ ಮಹದೇವಪ್ಪ ಉದ್ಘಾಟಿಸಿದರು.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರವರೆಗೂ ಸರ್ಕಾರಿ ರಜಾ ದಿನಗಳಲ್ಲೂ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಕನ್ಮಡ ಸಾಹಿತ್ಯ ಸಮ್ಮೇಳನ ಕುರಿತು ಪ್ರಚಾರ ಕೈಗೊಳ್ಳಲಿರುವ ರಥಕ್ಕೆ ಸಚಿವ ಮಹದೇವಪ್ಪ ಚಾಲನೆ ನೀಡಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕನ್ನಡ ತೇರಿಗೆ ಚಾಲನೆ ನೀಡಿದ ಸಚಿವ ಮಹದೇವಪ್ಪಗೆ, ಮತ್ತೋರ್ವ ಸಚಿವ ತನ್ವೀರ್ ಸೇಠ್, ಶಾಸಕ ವಾಸು, ಕ.ಸಾ.ಪ ಜಿಲ್ಲಾಧ್ಯಕ್ಷ ವೈ.ಡಿ ರಾಜಣ್ಣ ಸಾಥ್ ನೀಡಿದರು.

ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕನ್ನಡ ತೇರು ಸಂಚರಿಸಲಿದ್ದು, ಸಮಾರಂಭದ ವೇದಿಕೆ ನಿರ್ಮಾಣ ಕಾರ್ಯಕ್ಕೂ ಇದೆ ವೇಳೆ ಸಚಿವದ್ವಯರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.

Leave a Reply

Your email address will not be published.