ಅಪ್ಪ ಮಕ್ಕಳ ಪಕ್ಷ ಎಂಬ ಹಣೆಪಟ್ಟಿ ಕಿತ್ತೆಸೆದ JDS : ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ PGR ಸಿಂಧ್ಯಾ ನೇಮಕ

ಬೆಂಗಳೂರು : ಇದೇ ಮೊದಲ ಬಾರಿಗೆ ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನವನ್ನು ಸೃಷ್ಠಿಸಿದ್ದು, ಪಿಜಿಆರ್‌ ಸಿಂಧ್ಯಾ ಅವರನ್ನು ಜೆಡಿಎಸ್‌ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಇತ್ತೀಚೆಗಷ್ಟೇ ಪಿಜಿಆರ್‌ ಸಿಂಧಗ್ಯಾ ಸಕ್ರಿಯ ರಾಜಕಾರಣಕ್ಕೆ ಮರಳಿದ್ದ, ಪಕ್ಷದ ಮುಖಂಡ ಎಚ್‌.ಡಿ ದೇವೇಗೌಡ ಮಹತ್ವದ ಜವಾಬ್ದಾರಿಯನ್ನು ಸಿಂಧ್ಯಾ ಅವರಿಗೆ ವಹಿಸಿದ್ದಾರೆ. ಈವರೆಗೂ ಜೆಡಿಎಸ್‌ ರಾಜ್ಯ ಘಟಕಕ್ಕೆ ಮಾತ್ರ ಸೀಮಿತವಾಗಿತ್ತು, ಆದರೆ ಈಗ ಅದನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸಿದ್ದು, ಸಿಂಧ್ಯಾ ಅವರನ್ನು ಮಹತ್ವದ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ಸಿಂಧ್ಯಾ ಅವರ ಆಯ್ಕೆ ಬಳಿಕ ಮಾತನಾಡಿದ ಎಚ್‌.ಡಿ ದೇವೇಗೌಡರು, ಟಿಪ್ಪು ಜಯಂತಿಯನ್ನು ಕಳೆದ 20 ವರ್ಷಗಳಿಂದ ಪಕ್ಷದ ಕಚೇರಿಯಲ್ಲೇ ಆಚರಿಸಿಕೊಂಡು ಬರುತ್ತಿದ್ದೇವೆ. ನಾವು ಭಾರತೀಯರು, ಒಟ್ಟಿಗೆ ಬಾಳಬೇಕು. ನಾನು ಟಿಪ್ಪು ಬಗ್ಗೆ ಹೆಚ್ಚಿಗೆ ಅಧ್ಯಯನ ಮಾಡಿಲ್ಲ. ಶಾಲೆಯಲ್ಲಿದ್ದಾಗ ಟಿಪ್ಪು ಬಗ್ಗೆ ಕೇಳಿದ್ದೆ. ನಾವು ಅಧಿಕಾರದಲ್ಲಿ ಇದ್ದರೂ , ಇಲ್ಲದಿದ್ದರೂ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com