ಗುಜರಾತ್‌ ಗಡಿಯಲ್ಲಿ ನೂತನ ವಾಯುನೆಲೆ ನಿರ್ಮಾಣ : ಪಾಕ್‌ಗೆ ಶುರುವಾಗಿದೆ ನಡುಕ

ದೆಹಲಿ : ಪ್ರಧಾನಿ ನರೇಂದ್ರ ಮೋದಿ ತವರೂರಾದ ಗುಜರಾತ್‌ ಬಳಿ ಭಾರತೀಯ ವಾಯುಪಡೆ ಹೊಸ ವಾಯು ನೆಲೆ ನಿರ್ಮಾಣಕ್ಕೆ ಸಿದ್ದತೆ ನಡೆಸಿದ್ದು, ಇದರಿಂದ ಪಾಕಿಸ್ತಾನಕ್ಕೆ ಭಯ ಶುರುವಾಗಿದೆ.

ಗುಜರಾತ್‌ನ ಪಾಕಿಸ್ತಾನ ಗಡಿಗೆ ಹೊಂದಿಕೊಂಡಂತೆ ಭಾರತೀಯ ವಾಯುಪಡೆ ನೂತನ ವಾಯುನೆಲೆಯನ್ನು ಪ್ರಾರಂಭಿಸಿಲು ನಿರ್ಧರಿಸಿದೆ. ಈಗಾಗಲೆ ಗುಜರಾತ್‌ನಲ್ಲಿ ಮೂರು ವಾಯುನೆಲೆಗಳಿದ್ದು, ಇದರ ಹೊರತಾಗಿ ಬನಸ್ಕಾಂತ ಪ್ರದೇಶದ ದೀಸಾದಲ್ಲಿ ಮತ್ತೊಂದು ಅತ್ಯಾಧುನಿಕ ಸೌಲಭ್ಯವುಳ್ಳ ವಾಯುನೆಲೆಯನ್ನು ನಿರ್ಮಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಭಾರತದ ಈ ನಿರ್ಧಾರ ಪಾಕಿಸ್ತಾನಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಪಾಕಿಸ್ತಾನದ ಗಡಿ ಸಮೀಪ ಭಾರತ ವಾಯುನೆಲೆ ನಿರ್ಮಿಸಲು ನಿರ್ಧರಿಸಿರುವುದು ಸರಿಯಾದ ಕ್ರಮವಲ್ಲ. ಇದು ಬೇಜವಾಬ್ದಾರಿಯುತ ವರ್ತನೆಯಾಗಿದ್ದು, ಪಾಕಿಸ್ತಾನ್ಕಕೆ ಅಪಾಯಕಾರಿಯಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌ ಅಧಿಕಾರ ಸ್ವೀಕರಿಸಿದ ಬಳಿಕ ಗುಜರಾತ್‌ನಲ್ಲಿ ವಾಯುನೆಲೆ ನಿರ್ಮಿಸುವುದಾಗಿ ಹೇಳಿದ್ದರು. ಆಗಲೇ ಪಾಕಿಸ್ತಾನಕ್ಕೆ ಆತಂಕ ಉಂಟಾಗಿತ್ತು. ಈಗ ವಾಯುಮನೆಲೆ ನಿರ್ಮಾಣಕ್ಕೆ ಸಿದ್ದತೆ ನಡೆಯುತ್ತಿರುವುದು ಪಾಕಿಗಳಲ್ಲಿ ಭಯ ಸುರುವಾಗಿದೆ.

2010ರಲ್ಲಿ ಉಗ್ರರು ಸಂಸತ್‌ ಭವನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದಾಗಲೇ ಇಂತಹದ್ದೊಂದು ಯೋಜನೆ ರೂಪಿಸಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಈಗ ಆ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com